ಬೆಂಗಳೂರು: 2024ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟವಾಗಿದೆ. ಸಂಘ ಸಂಸ್ಥೆಗಳು ಹಾಗೂ ವೈಯಕ್ತಿಕವಾಗಿ ಒಟ್ಟು 69 ರಾಜ್ಯೋತ್ಸವ ಪ್ರಶಸ್ತಿಯನ್ನು ಈ ಬಾರಿ ಘೋಷಣೆ ಮಾಡಲಾಗಿದೆ. ಈ ಬಾರಿ 69 ಮಂದಿ ಸಾಧಕರಿಗೆ ಪ್ರಶಸ್ತಿ ಘೋಷಿಸಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಂಘ ಸಂಸ್ಥೆ ಸೇರಿ ವೈಯಕ್ತಿಕವಾಗಿ ಒಟ್ಟು 68 ರಾಜ್ಯೋತ್ಸವ ಪ್ರಶಸ್ತಿಯನ್ನು ಈ ಬಾರಿ ಘೋಷಣೆ ಮಾಡಲಾಗಿದೆ. ಇದರ ಜೊತೆ ಈ ಬಾರಿ ಸುವರ್ಣ ಕರ್ನಾಟಕ (50 ವರ್ಷ) ವರ್ಷವಾದ್ದರಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 50 ಪುರುಷರು ಹಾಗೂ 50 ಮಂದಿ ಮಹಿಳಾ ಸಾಧಕರಿಗೆ ವಿಶೇಷ ಪ್ರಶಸ್ತಿ ಘೋಷಣೆ ಮಾಡಲಾಗಿದೆ.
ಕರಾವಳಿಯ ನಾಲ್ವರಿಗೆ ಈ ಬಾರಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಒಲಿದಿದೆ. ಸಾಹಿತ್ಯ ಕ್ಷೇತ್ರದಲ್ಲಿ ಮಾಜಿ ಸಿಎಂ ವೀರಪ್ಪ ಮೊಯಿಲಿ,ಯಕ್ಷಗಾನದಲ್ಲಿ ಸೀತಾರಾಮ ತೋಳ್ಪಾಡಿ,ಜಾನಪದ ಕ್ಷೇತ್ರದಲ್ಲಿ ಭೂತಾರಾಧನೆಗೆ ಲೋಕೇಶ್ ಶೇರ, ಸಾಹಿತ್ಯ ಕ್ಷೇತ್ರದಲ್ಲಿ ಡಾ. ಪ್ರಶಾಂತ್ ಮಾಡ್ತಾ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿದೆ.
ಜಾನಪದ ಕ್ಷೇತ್ರ
- ಇಮಾಮಸಾಬ ಎಂ. ವಲ್ಲೆಪನವರ
- ಅಶ್ವ ರಾಮಣ್ಣ
- ಕುಮಾರಯ್ಯ
- ವೀರಭದ್ರಯ್ಯ
- ನರಸಿಂಹಲು (ಅಂಧ ಕಲಾವಿದ)
- ಬಸವರಾಜ ಸಂಗಪ್ಪ ಹಾರಿವಾಳ
- ಎಸ್.ಜಿ. ಲಕ್ಷ್ಮೀದೇವಮ್ಮ
- ಪಿಚ್ಚಳ್ಳಿ ಶ್ರೀನಿವಾಸ
- ಲೋಕಯ್ಯ ಶೇರ (ಭೂತಾರಾಧನೆ)
ಚಲನಚಿತ್ರ-ಕಿರುತೆರೆ
- ಹೇಮಾ ಚೌಧರಿ
- ಎಂಎಸ್ ನರಸಿಂಹಮೂರ್ತಿ
ಸಂಗೀತ ಕ್ಷೇತ್ರ
- ಪಿ ರಾಜಗೋಪಾಲ
- ಎಎನ್ ಸದಾಶಿವಪ್ಪ
ನೃತ್ಯ: ವಿದುಷಿ ಲಲಿತಾ ರಾವ್,
ಆಡಳಿ ಕ್ಷೇತ್ರ: ಎಸ್ವಿ ರಂಗನಾಥ್( ಮಾಜಿ ಮುಖ್ಯ ಕಾರ್ಯದರ್ಶಿ)
ವೈದ್ಯಕೀಯ ಕ್ಷೇತ್ರ: ಡಾ ಜೆಬಿ ಬಿಡನಹಾಳ, ಡಾ ಮೈಸೂರು ಸತ್ಯಾನಾರಾಯಣ. ಡಾ ಲಕ್ಷ್ಮಣ ಹನುಮಂತಪ್ಪ ಬಿದರಿ
ಸಮಾಜ ಸೇವೆ: ವೀರಸಂಗಯ್ಯ, ಹೀರಾಚಂದ್ ವಾಗ್ಮರೆ, ಮಲ್ಲಮ್ಮ ಸೂಲಗಿತ್ತಿ, ದಿಲೀಪ್ ಕುಮಾರ್.
ಸಂಕೀರ್ಣ ಕ್ಷೇತ್ರ: ಹುಲಿಕಲ್ ನಟರಾಜ್, ಹೆಚ್ಆರ್ ಸ್ವಾಮಿ, ಪ್ರಹ್ಲಾದ ರಾವ್, ಕೆ ಅಜಿತ್ ಕುಮಾರ್ ರೈ, ಇರ್ಫಾನ್ ರಜಾಕ್, ವಿರೂಪಾಕ್ಷಪ್ಪ ರಾಮಚಂದ್ರಪ್ಪ ಹಾವನೂರು,
ಹೊರದೇಶ-ಹೊರನಾಡು: ಕನ್ನಯ್ಯ ನಾಯ್ಡು, ಡಾ. ತುಂಬೆ ಮೊಹಿಯುದ್ದೀನ್, ಚಂದ್ರಶೇಖರ್ ನಾಯಕ್
ಪರಿಸರ: ಆಲ್ಮಿತ್ರಾ ಪಟೇಲ್
ಕೃಷಿ: ಶಿವನಾಪುರ ರಮೇಶ, ಪುಟ್ಟೀರಮ್ಮ
ಮಾಧ್ಯಮ: ಎನ್.ಎಸ್. ಶಂಕರ್, ಸನತ್ ಕುಮಾರ್ ಬೆಳಗಲಿ, ಎ.ಜಿ. ಕಾರಟಗಿ, ರಾಮಕೃಷ್ಣ ಬಡಶೇಶಿ
ಸಾಹಿತ್ಯ ಕ್ಷೇತ್ರ: ಮಾಜಿ ಸಚಿವೆ ಬಿ.ಟಿ. ಲಲಿತಾ ನಾಯಕ್
ಶಿಲ್ಪಕಲೆ ಕ್ಷೇತ್ರ: ಶಿಲ್ಪಿ ಅರುಣ್ ಯೋಗಿರಾಜ್ (ಅಯೋಧ್ಯಾ ಬಾಲರಾಮನ ಶಿಲ್ಪಿ)
ವಿಜ್ಞಾನ-ತಂತ್ರಜ್ಞಾನ: ಪ್ರೊ. ಟಿ.ವಿ. ರಾಮಚಂದ್ರ, ಸುಬ್ಬಯ್ಯ ಅರುಣನ್
ಸಹಕಾರ: ವಿರೂಪಾಕ್ಷಪ್ಪ ನೇಕಾರ
ಬಯಲಾಟ: ಸಿದ್ಧಪ್ಪ ಕರಿಯಪ್ಪ(ಅಂಧ ಕಲಾವಿದ), ನಾರಾಯಣಪ್ಪ ಶಿಳ್ಳೇಕ್ಯಾತ
ಯಕ್ಷಗಾನ : ಕೇಶವ್ ಹೆಗಡೆ, ಸೀತಾರಾಮ ತೋಳ್ಪಾಡಿ
ರಂಗಭೂಮಿ: ಸರಸ್ವತಿ ಜುಲೈಕ ಬೇಗಂ, ಓಬಳೇಶ್ ಹೆಚ್.ಬಿ., ಭಾಗ್ಯಶ್ರೀ ರವಿ, ಡಿ. ರಾಮು, ಜನಾರ್ಧನ್ ಹೆಚ್., ಹನುಮಾನದಾಸ ವ. ಪವಾರ.
ಸಾಹಿತ್ಯ: ಬಿ.ಟಿ. ಲಿಲಿತಾ ನಾಯಕ್ , ಅಲ್ಲಮಪ್ರಭು ಬೆಟ್ಟದೂರು. ಡಾ. ಎಂ. ವೀರಪ್ಪ ಮೊಯಿಲಿ. ಹನುಮಂತರಾವ್ ದೊಡ್ಡಮನಿ, ಡಾ. ಬಾಳಾಸಾಹೇಬ್ ಲೋಕಾಪುರ, ಬೈರಮಂಗಲ ರಾಮೇಗೌಡ. ಡಾ. ಪ್ರಶಾಂತ್ ಮಾಡ್ತಾ
ಶಿಕ್ಷಣ: ಡಾ. ವಿ. ಕಮಲಮ್ಮ, ಡಾ. ರಾಜೇಂದ್ರ ಶೆಟ್ಟಿ., ಡಾ. ಪದ್ಮಾ ಶೇಖರ್
ಕ್ರೀಡೆ: ಜೂಡ್ ಫೆಲಿಕ್ಸ್ ಸೆಬಾಸ್ಟಿಯನ್, ಗೌತಮ್ ವರ್ಮ, ಆರ್. ಉಮಾದೇವಿ
ನ್ಯಾಯಾಂಗ: ಬಾಲನ್
ಚಿತ್ರಕಲೆ: ಪ್ರಭು ಹರಸೂರು
ಕರಕುಶಲ: ಚಂದ್ರಶೇಖರ ಸಿರಿವಂತೆ


