Tuesday, October 13, 2026
Homeತಾಜಾ ಸುದ್ದಿಬಳ್ಳಾರಿ ಜೈಲಿನಿಂದ ನಟ ಡಿ ಬಾಸ್ ದರ್ಶನ್ ರಿಲೀಸ್

ಬಳ್ಳಾರಿ ಜೈಲಿನಿಂದ ನಟ ಡಿ ಬಾಸ್ ದರ್ಶನ್ ರಿಲೀಸ್

- Advertisement -
- Advertisement -

ಬಳ್ಳಾರಿ; ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಅವರಿಗೆ ಮಧ್ಯಂತರ ಜಾಮೀನು ಸಿಕ್ಕ ಬೆನ್ನಲ್ಲೇ ಅವರು ಬಳ್ಳಾರಿ ಜೈಲಿನಿಂದ ರಿಲೀಸ್ ಆಗಿದ್ದಾರೆ. ನಟ ದರ್ಶನ್ ಜೈಲಿನಿಂದ ಹೊರ ಬರುತ್ತಿದ್ದಂತೆ ಅವರ ಅಭಿಮಾನಿಗಳ ಹರ್ಷೋದ್ಗಾರ, ಜೈ ಘೋಷಣೆ ಮುಗಿಲುಮುಟ್ಟಿತು.

ಹೈಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿದ ಬಳಿಕ ಬೆಂಗಳೂರಿನ 57ನೇ ಸಿಸಿಎಚ್ ನ್ಯಾಯಾಲಯದ ಬಳ್ಳಾರಿ ಜೈಲಿಗೆ ಇಮೇಲ್ ಮುಖಾಂತರ ದರ್ಶನ್ ಅವರನ್ನು ರಿಲೀಸ್ ಮಾಡಿ ಎಂದು ಆದೇಶದ ಪ್ರತಿ ಕಳುಹಿಸಿದ್ದರು. ಜೈಲು ಅಧಿಕಾರಿಗಳು ಇದೀಗ ಆದೇಶ ಪ್ರತಿಯನ್ನು ಪಡೆದುಕೊಂಡು ನಟ ದರ್ಶನ್ ಅವರನ್ನು ರಿಲೀಸ್ ಮಾಡಿದ್ದಾರೆ. ಹೈ ಸೆಕ್ಯೂರಿಟಿ ಸೆಲ್ ನಿಂದ ನಟ ದರ್ಶನ್ ಕುಂಟುತ್ತಲೇ ಹೊರಬಂದರು. ಹೊರಗಡೆ ಇನ್ನೋವಾ ಕಾರಿನಲ್ಲಿ ಪತ್ನಿ ವಿಜಯಲಕ್ಷ್ಮಿ ಅವರು ಪತಿ ದರ್ಶನ್ ಅವರ ಬರುವಿಕೆಯಗಾಗಿ ಕಾದು ಕುಳಿತಿದ್ದರು.

ಜೈಲಿನಿಂದ ಹೊರಗಡೆ ಬಂದ ಬಳಿಕ ನಟ ದರ್ಶನ್ ಅವರು ಪತ್ನಿ ತಂದ ಕಾರಿನಲ್ಲಿ ಬೆಂಗಳೂರಿಗೆ ತೆರಳಲಿದ್ದು, ಅಭಿಮಾನಿಗಳನ್ನು ನಿಯಂತ್ರಿಸುವ ಹಿನ್ನೆಲೆಯಲ್ಲಿ ಆಂಧ್ರಪ್ರದೇಶದ ಅನಂತಪುರದ ರಸ್ತೆಯ ಮಾರ್ಗವಾಗಿ ಬೆಂಗಳೂರಿಗೆ ತೆರಳುತ್ತಾರೆ. ಹೀಗಾಗಿ ಅವರಿಗೆ ಬಳ್ಳಾರಿ ಜಿಲ್ಲೆಯ ಗಡಿ ದಾಟುವ ವರೆಗೂ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದ್ದು 50 ಸಿಬ್ಬಂದಿಗಳನ್ನು ಭದ್ರತೆಗೆ ನಿಯೋಜನೆ ಮಾಡಲಾಗಿದೆ.

ಬಳಿಕ ನಟ ದರ್ಶನ್ ಅವರು ಬೆಂಗಳೂರಿಗೆ ತೆರಳಿ ನಾಳೆ ಒಂದು ದಿನ ಮನೆಯಲ್ಲಿ ವಿಶ್ರಾಂತಿ ಪಡೆದು ನಂತರ ಆಸ್ಪತ್ರೆಗೆ ದಾಖಲಿಸಿ ತಮ್ಮ ಬೆನ್ನು ನೋವಿಗೆ ಸೂಕ್ತವಾದಂತಹ ಚಿಕಿತ್ಸೆ ಪಡೆಯಲಿದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲದೆ ನಾಳೆ ಪುತ್ರ ವಿನೇಶ್ ನ ಹುಟ್ಟುಹಬ್ಬ ಕೂಡ ಇರುವ ಹಿನ್ನೆಲೆಯಲ್ಲಿ ನಾಳೆ ಒಂದು ದಿನ ವಿಶ್ರಾಂತಿ ಪಡೆಯಲಿದ್ದಾರೆ.

- Advertisement -

Latest News

error: Content is protected !!