- Advertisement -
- Advertisement -
ಮಂಗಳೂರು: ಕಳ್ಳರು ಮೊಬೈಲ್ ಟವರನ್ನೇ ಕದ್ದ ಘಟನೆ ಮಂಗಳೂರಿನ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮುಂಬೈಯ ಜಿ.ಟಿ.ಎಲ್ ಇನ್ಪ್ರಾಸ್ಟ್ರಕ್ಚರ್ ಕಂಪನಿ ಲಿಮಿಟೆಡ್ ಬೆಂಗಳೂರು ಶಾಖೆ ಈ ಮೊಬೈಲ್ ಟವರನ್ನು ಮಂಗಳೂರಿನ ತಿರುವೈಲ್‌ನ ಮೂಡುಬಿದಿರೆ ರಸ್ತೆ ಬದಿಯಲ್ಲಿ ನಿರ್ಮಾಣ ಮಾಡಿತ್ತು. ಮೊಬೈಲ್ ಟವರ್ ನಿರ್ವಹಣೆಯ ಉಸ್ತುವಾರಿ ವಹಿಸಿದ್ದ ಟೆಕ್ನಿಷಿಯನ್ ರವರು ಪರಿಶೀಲನೆಗಾಗಿ ಸ್ಥಳಕ್ಕೆ ಭೇಟಿ ನೀಡಿದಾಗ ಮೊಬೈಲ್ ಟವರ್ ಮತ್ತು ಮೊಬೈಲ್ ಟವರ್ ನ ಇತರ ಉಪಕರಣಗಳನ್ನು ಯಾರೋ ಕಳ್ಳತನ ಮಾಡಿರುವುದು ಗಮನಕ್ಕೆ ಬಂದಿದೆ. ಕಳವಾಗಿರುವ ಸೊತ್ತುಗಳ ಒಟ್ಟು ಮೌಲ್ಯ ಸುಮಾರು ರೂ: 19,823,71-00 ಆಗಿದೆ ಎಂದು ಅಂದಾಜಿಸಲಾಗಿದೆ. ಇದೀಗ ಮೊಬೈಲ್ ಟವರ್ ಕಳವಾದ ಬಗ್ಗೆ GTL ಇನ್ಪ್ರಾಸ್ಟ್ರಕ್ಚರ್ ಕಂಪನಿ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದು ಪೊಲೀಸರು ದೂರು ದಾಖಲು ಮಾಡಿ ತನಿಖೆ ಆರಂಭಿಸಿದ್ದಾರೆ.
- Advertisement -