Wednesday, June 3, 2026
Homeಕರಾವಳಿಉಡುಪಿಉಡುಪಿ: ಬಾಲಕೃಷ್ಣ ಪೂಜಾರಿ ಕೊಲೆ ಆರೋಪಿ ದಿಲೀಪ್ ಹೆಗ್ಡೆಗೆ ನ. 7 ರವರೆಗೆ ನ್ಯಾಯಾಂಗ ಬಂಧನ

ಉಡುಪಿ: ಬಾಲಕೃಷ್ಣ ಪೂಜಾರಿ ಕೊಲೆ ಆರೋಪಿ ದಿಲೀಪ್ ಹೆಗ್ಡೆಗೆ ನ. 7 ರವರೆಗೆ ನ್ಯಾಯಾಂಗ ಬಂಧನ

- Advertisement -
- Advertisement -

ಉಡುಪಿ: ಕಾರ್ಕಳ ತಾಲೂಕಿನ ಅಜೆಕಾರಿನಲ್ಲಿ ನಡೆದ ಬಾಲಕೃಷ್ಣ ಪೂಜಾರಿ ಕೊಲೆ ಪ್ರಕರಣದ ಆರೋಪಿ ದಿಲೀಪ್ ಹೆಗ್ಡೆಗೆ ನವೆಂಬರ್ 7 ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಪ್ರೇಯಸಿ ಪ್ರತಿಮಾ ಜೊತೆ ಸೇರಿ ಆಕೆಯ ಪತಿಯ ಕೊಲೆ ನಡೆಸಿದ ಪ್ರಕರಣದಲ್ಲಿ ಎ2 ಆರೋಪಿಯಾಗಿರುವ ದಿಲೀಪ್ ಹೆಗ್ಡೆ ಪೊಲೀಸ್ ಕಸ್ಟಡಿಯ ಅವಧಿ ಇಂದಿಗೆ ಮುಕ್ತಾಯವಾಗಿದ್ದ ಹಿನ್ನೆಲೆಯಲ್ಲಿ ಇಂದು ಪೊಲೀಸರು ಕಾರ್ಕಳ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು.

ನ್ಯಾಯಾಲಯ ನವೆಂಬರ್ 7‌ ರವರೆಗೆ ಆರೋಪಿ ದಿಲೀಪ್ ಹೆಗ್ಡೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ.‌

ಇನ್ನು ಕೊಲೆಗೆ ಬಳಸಿರುವ ಆರ್ಸೆನಿಕ್ ರಾಸಾಯನಿಕವನ್ನು ತಾನು ವಿದ್ಯಾರ್ಥಿ ಎಂದು ಸುಳ್ಳು ಹೇಳಿ ಉಡುಪಿಯ ರಮಣ್ ಲ್ಯಾಬ್ ನಿಂದ ಖರೀದಿ ಮಾಡಿರುವುದಾಗಿ ದಿಲೀಪ್ ಹೆಗ್ಡೆ
ವಿಚಾರಣೆ ವೇಳೆ ತಪ್ಪು ಒಪ್ಪಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.

ಇದೇ ವೇಳೆ ತನಿಖೆಯ ಭಾಗವಾಗಿ ರಾಸಾಯನಿಕ ಖರೀದಿಸಿದ್ದ ರಮಣ್ ಲ್ಯಾಬ್ ಮಾಲೀಕ ಗುಂಡೂರಾವ್ ಅವರ ಮೊಬೈಲ್ ಫೋನ್ ಅನ್ನು ಪೊಲೀಸರು ಸೀಜ್ ಮಾಡಿದ್ದಾರೆ ಎ‌ನ್ನಲಾಗಿದೆ.

- Advertisement -

Latest News

error: Content is protected !!