Thursday, June 4, 2026
Homeಕರಾವಳಿಬಿಜೆಪಿ ಶಾಸಕರಾದ ಸಿ.ಟಿ. ರವಿ, ಯತ್ನಾಳ್‌, ಸೂಲಿಬೆಲೆ ವಿರುದ್ದ ದೂರು

ಬಿಜೆಪಿ ಶಾಸಕರಾದ ಸಿ.ಟಿ. ರವಿ, ಯತ್ನಾಳ್‌, ಸೂಲಿಬೆಲೆ ವಿರುದ್ದ ದೂರು

- Advertisement -
- Advertisement -

ಮಂಗಳೂರು: ದ.ಕ. ಜಿಲ್ಲಾ ಕಾಂಗ್ರೆಸ್‌ ಅಲ್ಪಸಂಖ್ಯಾತ ವಿಭಾಗವು ಬಿಜೆಪಿ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ, ಸಿ.ಟಿ. ರವಿ ಮತ್ತು ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಅವರು ಕೋಮು ಪ್ರಚೋದನೆ ಮಾಡಿದ್ದಾರೆ, ವಕ್ಫ್ ಆಸ್ತಿಯ ಬಗ್ಗೆ ತಪ್ಪು ಮಾಹಿತಿ ಹರಡಿದ್ದಾರೆ, ಇಸ್ಲಾಂ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ಶುಕ್ರವಾರ ಪೊಲೀಸ್‌ ಆಯುಕ್ತ ಅನುಪಮ್‌ ಅಗರ್‌ವಾಲ್‌ ಅವರಿಗೆ ದೂರು ಸಲ್ಲಿಸಲಾಯಿತು.

ಈ ಮೂವರು ಕೋಮುದ್ವೇಷ ಹರಡಿಸಲು ಯತ್ನಿಸುತ್ತಿದ್ದು, ಇವರ ವಿರುದ್ದ ಕೂಡಲೇ ಕಠಿನ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಒತ್ತಾಯಿಸಲಾಯಿತು. ಸಾಹುಲ್‌ ಹಮೀದ್‌, ಆಲ್ವಿನ್‌ ಡಿ’ಸೋಜಾ, ಮಹಮ್ಮದ್‌ ಬಪ್ಪಾಲಿಗೆ, ಆಲ್ವಿನ್‌ ಪ್ರಕಾಶ್‌, ಥೋಮಸ್‌, ಚೆರಿಯನ್‌, ಹಬೀಬ್‌ ಕಣ್ಣೂರ್‌, ಜಾರ್ಜ್‌, ಇಮ್ರಾನ್‌ ಎ.ಆರ್‌. ಉಪಸ್ಥಿತರಿದ್ದರು.

- Advertisement -

Latest News

error: Content is protected !!