Sunday, June 7, 2026
Homeಉದ್ಯಮಬೆಳ್ಳಾರೆ ಪೇಟೆಯ ಅಂಗಡಿಯೊಂದರ ಮುಂದೆ ಕಂಡು ಬಂದ ಆಡುಗಳು; ಸಾಕು ಪ್ರಾಣಿಗಳ ಮಾಲಕರಿಗೆ ದಂಡ ವಿಧಿಸಿ...

ಬೆಳ್ಳಾರೆ ಪೇಟೆಯ ಅಂಗಡಿಯೊಂದರ ಮುಂದೆ ಕಂಡು ಬಂದ ಆಡುಗಳು; ಸಾಕು ಪ್ರಾಣಿಗಳ ಮಾಲಕರಿಗೆ ದಂಡ ವಿಧಿಸಿ ಎಚ್ಚರಿಕೆ

- Advertisement -
- Advertisement -

ಸುಳ್ಯ: ಸಾಕು ಪ್ರಾಣಿಗಳನ್ನು ಮೇಯಲು ಹಾಗೂ ಅಲೆದಾಡಲು ಸಾರ್ವಜನಿಕವಾಗಿ ಪೇಟೆಯಲ್ಲಿ ಬಿಡಬಾರದು ಎಂಬ ಸೂಚನೆಗಳನ್ನು ನೀಡುತ್ತಾ ಬರಲಾಗಿದ್ದರೂ ಸೂಚನೆ ಉಲ್ಲಂಘಿಸುವ ಸಾಕು ಪ್ರಾಣಿಗಳ ಮಾಲಕರಿಗೆ ದಂಡ ವಿಧಿಸಿ ಎಚ್ಚರಿಕೆ ನೀಡಲು ಬೆಳ್ಳಾರೆ ಗ್ರಾಮ ಪಂಚಾಯತ್‌ ಮುಂದಾಗಿದೆ.

ಸಾಕುಪ್ರಾಣಿಗಳನ್ನು ಬೆಳ್ಳಾರೆ ಪೇಟೆಯಲ್ಲಿ ಯಾವುದೇ ಕಾರಣಕ್ಕೂ ಅಲೆದಾಡಲು ಬಿಡದಂತೆ ಗ್ರಾ.ಪಂ. ಸೂಚನೆ ನೀಡಿತ್ತು. ಆದರೆ ನಿಯಮವನ್ನು ಉಲ್ಲಂಘಿಸಿ ಆಡುಗಳನ್ನು ಬಿಡುತ್ತಿರುವುದರಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿರುವ ಬಗ್ಗೆ ಗ್ರಾಮ ಪಂಚಾಯತ್‌ ಗೆ ದೂರು ಸಲ್ಲಿಕೆಯಾಗಿತ್ತು. ಇದೀಗ ನಿಯಮವನ್ನು ಉಲ್ಲಂಘಿಸಿದವರ ವಿರುದ್ಧ ಕ್ರಮಕ್ಕೆ ಆಡಳಿತ ಮುಂದಾಗಿದೆ. ಪೇಟೆಗೆ ಬಿಟ್ಟ ಆಡುಗಳನ್ನು ಗ್ರಾ.ಪಂ. ಕಟ್ಟಿ ಹಾಕಿ ಆಡಿನ ಮಾಲಕರಿಗೆ ದಂಡ ವಿಧಿಸಲಾಗಿದೆ. ಮುಂದೆಯೂ ಸೂಚನೆ ಉಲ್ಲಂ ಸುವುದು ಕಂಡು ಬಂದಲ್ಲಿ ದಂಡದ ಮೊತ್ತವನ್ನು ಇನ್ನಷ್ಟು ಹೆಚ್ಚಳ ಮಾಡಲಾಗುತ್ತದೆ ಎಂಬ ಎಚ್ಚರಿಕೆಯನ್ನು ಗ್ರಾ.ಪಂ. ನೀಡಿದೆ.

ಈ ಮೊಲದೇ ಪೇಟೆಯಲ್ಲಿ ಆಡುಗಳನ್ನು ಬಿಡದಂತೆ ಸೂಚನೆ ನೀಡಲಾಗಿತ್ತಾದರೂ, ಇದನ್ನು ಮೀರಿ ಮಾಲಕರು ಆಡನ್ನು ಪೇಟೆಗೆ ಬಿಟ್ಟಿದ್ದು, ಈ ಬಗ್ಗೆ ಸಾರ್ವಜನಿಕರು ದೂರು ನೀಡಿದ್ದರು. ಅದರಂತೆ ಪೇಟೆಗೆ ಬಿಟ್ಟಿದ್ದ ಆಡನ್ನು ಕಟ್ಟಿ ಹಾಕಿ ಮಾಲಕರನ್ನು ಕರೆಸಿ ಅವರಿಗೆ ಮುಂದೆ ಆಡನ್ನು ಬಿಡದಂತೆ ಸೂಚಿಸಿ ದಂಡ ವಿಧಿಸಿ, ಆಡನ್ನು ಬಿಟ್ಟು ಕೊಡಲಾಗಿದೆ ಎಂದು ತಿಳಿದು ಬಂದಿದೆ.

ಇನ್ನು ಹೀಗೆಯೇ ಆಡನ್ನು ಪೇಟೆಗೆ ಬಿಡುತ್ತಿದ್ದರೆ ದಂಡದ ಮೊತ್ತ ಹೆಚ್ಚುಗೊಳಿಸಲಾಗುವುದು. ಇದರ ಬಗ್ಗೆ ಗಮನ ಹರಿಸಬೇಕೆಂದು ಆಡಿನ ಮಾಲಕರಿಗೆ ಅಧಿಕಾರಿಗಳು ತಿಳಿಸಿದ್ದಾರೆ.

- Advertisement -

Latest News

error: Content is protected !!