Sunday, June 7, 2026
Homeಕರಾವಳಿಕಡಬದ ಅಲಂಕಾರಿನಲ್ಲಿ ಮಂಗಳವಾರ ಬೆಳಗ್ಗೆ ಹುಲಿ ಪ್ರತ್ಯಕ್ಷ

ಕಡಬದ ಅಲಂಕಾರಿನಲ್ಲಿ ಮಂಗಳವಾರ ಬೆಳಗ್ಗೆ ಹುಲಿ ಪ್ರತ್ಯಕ್ಷ

- Advertisement -
- Advertisement -

ಕಡಬ ತಾಲೂಕಿನ ಅಲಂಕಾರಿನಲ್ಲಿ ಮಂಗಳವಾರ ಬೆಳಗ್ಗೆ ಹುಲಿ ಪ್ರತ್ಯಕ್ಷವಾಗಿ ಆತಂಕ ಮೂಡಿಸಿದೆ.

ಅಲಂಕಾರು ಗ್ರಾಮದ ನೆಕ್ಕಿಲಾಡಿ ಬೈಲು ನೈಯಲ್ಗ ನಿವಾಸಿ ಜನಾರ್ದನ ಬಂಗೇರ ಎಂಬವರ ಮನೆಯ ಸಮೀಪ ಮಂಗಳವಾರ ಬೆಳಗ್ಗೆ ಹುಲಿ ಪ್ರತ್ಯಕ್ಷವಾಗಿದೆ. ಕೂಡಲೇ ಅವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಉಪ ವಲಯ ಅರಣ್ಯಾಧಿಕಾರಿ ಜಯಕುಮಾರ್, ಗಸ್ತು ಅರಣ್ಯ ಪಾಲಕ ರವಿಕುಮಾರ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಸ್ಥಳ ಪರಿಶೀಲನೆ ವೇಳೆ ಸ್ಥಳದಲ್ಲಿ ಕಾಡುಪ್ರಾಣಿಯ ಹೆಜ್ಜೆ ಗುರುತು ಕಂಡುಬಂದಿದ್ದು  ಅದು ಚಿರತೆಯದ್ದೋ ಅಥವಾ ಹುಲಿಯದ್ದೋ ಅನ್ನುವುದು ಪರಿಶೀಲನೆಯ ಬಳಿಕ ತಿಳಿದು ಬರಬೇಕಿದೆ ಎಂದು ಅರಣ್ಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

- Advertisement -

Latest News

error: Content is protected !!