Tuesday, July 1, 2025
Homeಕರಾವಳಿಉಡುಪಿಕೌನ್‌ ಬನೇಗಾ ಕರೋಡ್‌ಪತಿಯಲ್ಲಿ 12.5 ಲ.ರೂ.ಗೆದ್ದ ಕಾರ್ಕಳ ಮೂಲದ ಡಾ| ಶ್ರೀಶ್‌ ಶೆಟ್ಟಿ

ಕೌನ್‌ ಬನೇಗಾ ಕರೋಡ್‌ಪತಿಯಲ್ಲಿ 12.5 ಲ.ರೂ.ಗೆದ್ದ ಕಾರ್ಕಳ ಮೂಲದ ಡಾ| ಶ್ರೀಶ್‌ ಶೆಟ್ಟಿ

spot_img
- Advertisement -
- Advertisement -

ಕಾರ್ಕಳ: ಕರಾವಳಿ ಮೂಲದ ಕಾರ್ಕಳ ತಾಲೂಕಿನ ನಿಂಜೂರು ಮೂಡುಮನೆ ಡಾ| ಶ್ರೀಶ್‌ ಸತೀಶ್‌ ಶೆಟ್ಟಿ ಅವರು ಸೋನಿ ಟಿವಿಯಲ್ಲಿ ಪ್ರಸಾರವಾಗುತ್ತಿರುವ ಕೌನ್‌ ಬನೇಗಾ ಕರೋಡ್‌ಪತಿ (ಕೆಬಿಸಿ) ಯಲ್ಲಿ 12 ಪ್ರಶ್ನೆಗಳಿಗೆ ಸರಿಯುತ್ತರ ನೀಡಿ 12.5 ಲ.ರೂ. ಗೆದ್ದುಕೊಂಡಿದ್ದಾರೆ. ಅವರ ಸಂಚಿಕೆಯು ಅ. 10 ಮತ್ತು 11 ರಂದು ಸೋನಿ ಟಿವಿಯಲ್ಲಿ ಪ್ರಸಾರಗೊಂಡಿದೆ.

12 ಪ್ರಶ್ನೆಗಳಿಗೆ ಡಾ| ಸತೀಶ್ ಶೆಟ್ಟಿಯವರು ಸರಿಯಾದ ಉತ್ತರ ಕೊಟ್ಟಿದ್ದರು. 13ನೇ ಪ್ರಶ್ನೆಯಾಗಿ 1971ರ ಮುಂಬೈ ಉತ್ತರಪೂರ್ವ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅಭ್ಯರ್ಥಿ ಯ ಹೆಸರು ಕೇಳಲಾಗಿತ್ತು. ಜ| ಕೆ.ಎಂ.ಕಾರ್ಯಪ್ಪ, ವಿಜಯ ತೆಂಡೂಲ್ಕರ್‌, ಪಂ|ಭೀಮಸೇನ್‌ ಜೋಷಿ ಹಾಗೂ ರಾಜ್‌ ಕಪೂರ್‌ ಆಯ್ಕೆ ನೀಡಲಾಗಿತ್ತು. ಆ ಉತ್ತರದ ಬಗ್ಗೆ ಸ್ಪಷ್ಟತೆ ಇರದೇ ಇದ್ದುದರಿಂದ ಸ್ಪರ್ಧೆಯಿಂದ ಹಿಂದೆ ಸರಿದು 12.5 ಲ.ರೂ. ಗೆದ್ದುಕೊಂಡಿದ್ದಾರೆ. ಡಾ| ಶ್ರೀಶ್‌ ಸತೀಶ್‌ ಶೆಟ್ಟಿ ಅವರು ಪಳ್ಳಿ-ನಿಂಜೂರು ಮೂಡುಮನೆ ಶ್ರಿವಲ್ಲಿ ಶೆಟ್ಟಿ ಮತ್ತು ಸುರತ್ಕಲ್‌ ದೇವಿ ನಿಲಯ ಸತೀಶ್‌ ಶೆಟ್ಟಿಯವರ ಪುತ್ರನಾಗಿದ್ದು, ಪ್ರಸ್ತುತ ಗುಜರಾತ್‌ನ ಅಹಮದಾಬಾದ್‌ ನಲ್ಲಿ ನೆಲೆಸಿದ್ದಾರೆ.

ಪ್ರಸ್ತುತ ಅಹಮದಾಬಾದ್‌ನ ಬಿಜೆ ಮೆಡಿಕಲ್‌ ಕಾಲೇಜಿನಲ್ಲಿ ಸ್ನಾತಕೋತ್ತರ(ಎಂಡಿ)ಪದವಿ ಶಿಕ್ಷಣವನ್ನು ಪಡೆಯುತ್ತಿದ್ದಾರೆ.

- Advertisement -
spot_img

Latest News

error: Content is protected !!