Saturday, June 13, 2026
Homeಕರಾವಳಿಮಂಗಳೂರುಮಂಗಳೂರು: ಪ್ರಯಾಣಿಕರ ಎದುರೇ ಬಡಿದಾಡಿಕೊಂಡ ಖಾಸಗಿ ಬಸ್ ಸಿಬ್ಬಂದಿ

ಮಂಗಳೂರು: ಪ್ರಯಾಣಿಕರ ಎದುರೇ ಬಡಿದಾಡಿಕೊಂಡ ಖಾಸಗಿ ಬಸ್ ಸಿಬ್ಬಂದಿ

- Advertisement -
- Advertisement -

ಮಂಗಳೂರು: ಪ್ರಯಾಣಿಕರ ಎದುರೇ ಖಾಸಗಿ ಬಸ್ ಸಿಬ್ಬಂದಿ ಬಡಿದಾಡಿಕೊಂಡ ಘಟನೆ ನಡೆದಿದೆ. ವಿಟ್ಲ-ಮಂಗಳೂರಿಗೆ ಬರುವ ಖಾಸಗಿ ಬಸ್ ಹಾಗೂ ಪುತ್ತೂರು-ಮಂಗಳೂರು ಮಧ್ಯೆ ಸಂಚರಿಸುವ ಬಸ್ ಸಿಬ್ಬಂದಿಗ ಪ್ರಯಾಣಿಕರ ಕಣ್ಮುಂದೆಯೇ ಪರಸ್ಪರ ಬಡಿದಾಡಿಕೊಂಡಿದ್ದಾರೆ.
ಬಸ್ ಗೆ ನುಗ್ಗಿದ ಮತ್ತೊಂದು ಬಸ್ ನ ಸಿಬ್ಬಂದಿ, ಬಸ್ ನಿರ್ವಾಹಕನ್ನು ಎಳೆದಾಡಿ ಸ್ಕೂಡ್ರೈವರ್ ನಲ್ಲಿ ಚುಚ್ಚಿ ಹಲ್ಲೆಗೆ ಯತ್ನಿಸಿದ್ದಾರೆ. ಪ್ರಯಾಣಿಕರ ಎದುರೇ ರೌಡಿಗಳ ರೀತಿಯಲ್ಲಿ ಗಲಾಟೆ ನಡೆಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಪ್ರತಿನಿತ್ಯ ಖಾಸಗಿ ಬಸ್ ಸಿಬ್ಬಂದಿಗಳ ಅಟ್ಟಹಾಸ ಮಿತಿಮೀರಿದ್ದು ಸಭ್ಯ ಪ್ರಯಾಣಿಕರು ಓಡಾಡಲು ಹಿಂಜರಿಯುತ್ತಿದ್ದಾರೆ. ಪೊಲೀಸರು, ಆರ್ ಟಿ ಒ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿಯೇ ಖಾಸಗಿ ಬಸ್ ಸಿಬ್ಬಂದಿಗಳು ಅನಾಗರಿಕರಾಗಿದ್ದಾರೆಂಬ ಆರೋಪ ಸಾರ್ವಜನಿಕರಿಂದ ವ್ಯಕ್ತವಾಗಿದೆ.

- Advertisement -

Latest News

error: Content is protected !!