- Advertisement -
![]()
- Advertisement -
ಮಂಗಳೂರು; ಕಟೀಲು ದುರ್ಗಾಪರಮೇಶ್ವರಿ ದೇಗುಲದಲ್ಲಿ 15 ಸಾವಿರಕ್ಕೂ ಹೆಚ್ಚು ಮಹಿಳೆಯರಿಗೆ ಶೇಷ ವಸ್ತ್ರದ ವಿತರಣೆ ಮಾಡಲಾಗಿದೆ.
ನಿನ್ನೆ ನವರಾತ್ರಿ ಮಹೋತ್ಸವದ ಅಂಗವಾಗಿ ಲಲಿತಾ ಪಂಚಮಿಯ ಆರಾಧನೆ ನಡೆಯಿತು. ಈ ವೇಳೆ ಸುಮಾರು 15 ಸಾವಿರಕ್ಕೆ ಅಧಿಕ ಮಹಿಳಾ ಭಕ್ತರಿಗೆ ಶ್ರೀ ದೇವರ ಶೇಷ ವಸ್ತ್ರದ ವಿತರಣೆಯು ಅನ್ನ ಪ್ರಸಾದದ ಸಂದರ್ಭದಲ್ಲಿ ನಡೆಯಿತು.
ಮಧ್ಯಾಹ್ನ 10 ಸಾವಿರ ಹಾಗೂ ರಾತ್ರಿ ಸುಮಾರು 20 ಸಾವಿರ ಭಕ್ತರು ಅನ್ನ ಪ್ರಸಾದ ಸ್ವೀಕರಿಸಿದರು. ಕಟೀಲು ದೇವಸ್ಥಾನದಲ್ಲಿ ಅನ್ನ ಪ್ರಸಾದ ಹಾಗೂ ಶ್ರೀ ದೇವರ ಶೇಷ ವಸ್ತ್ರದ ಪಡೆಯಲು ಮಹಿಳಾ ಭಕ್ತರು ಮಧ್ಯಾಹ್ನದಿಂದಲೇ ಕ್ಯೂನಲ್ಲಿ ನಿಂತಿದ್ದರು. ಅವರಿಗೆ ಸಕಲ ವ್ಯವಸ್ಥೆ ಮಾಡಲಾಗಿತ್ತು.
ದೇವರ ದರ್ಶನ ಹಾಗೂ ಅನ್ನ ಪ್ರಸಾದ ವಿತರಣೆಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ ಎಂದು ದೇವಸ್ಥಾನದ ಮೂಲ ತಿಳಿಸಿದೆ. ಭಾರೀ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರಿಂದ ಅಲ್ಲಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು.
- Advertisement -


