Thursday, June 4, 2026
Homeಕರಾವಳಿಉಡುಪಿಗೀತಾಂಜಲಿ ಸಿಲ್ಕ್ಸ್ ನಲ್ಲಿ ಈಗ ಪುರುಷರಿಗೂ ಬೃಹತ್‌ ಮಳಿಗೆ; ಅ.9ರಂದು ಪುರುಷರ ಬಟ್ಟೆಗಳ ವಿಭಾಗ ಗ್ರಾಹಕರಿಂದಲೇ ಉದ್ಘಾಟನೆ

ಗೀತಾಂಜಲಿ ಸಿಲ್ಕ್ಸ್ ನಲ್ಲಿ ಈಗ ಪುರುಷರಿಗೂ ಬೃಹತ್‌ ಮಳಿಗೆ; ಅ.9ರಂದು ಪುರುಷರ ಬಟ್ಟೆಗಳ ವಿಭಾಗ ಗ್ರಾಹಕರಿಂದಲೇ ಉದ್ಘಾಟನೆ

- Advertisement -
- Advertisement -

ಉಡುಪಿ:  ಗೀತಾಂಜಲಿ ಸಿಲ್ಕ್ಸ್ ನಲ್ಲಿ ನೂತನವಾಗಿ ಆರಂಭವಾಗಿರುವ ಪುರುಷರ ಬಟ್ಟೆಗಳ ವಿಶಾಲ ವಿಭಾಗದ ಉದ್ಘಾಟನೆಯು ಗ್ರಾಹಕರಿಂದಲೇ ನಡೆಯಲಿದ್ದು, ಉದ್ಘಾಟನೆಯು “ಗ್ರಾಹಕರೇ ದೇವರು” ಎನ್ನುವ ಪರಿಕಲ್ಪನೆಯಡಿ ಸಂಸ್ಥೆಯ ಒಂದನೇ ಮಹಡಿಯಲ್ಲಿ ಅ.9ರಂದು ಬೆಳಗ್ಗೆ 9.45ಕ್ಕೆ ನೆರವೇರಲಿದೆ ಎಂದು ಗೀತಾಂಜಲಿ ಸಂಸ್ಥೆಯ ಪ್ರವರ್ತಕರಾದ ಸಂತೋಷ್‌ ವಾಗ್ಲೆ ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಸ್ವದೇಶಿ ಹಾಗೂ ವಿದೇಶಿಯ ಎಲ್ಲ ಪ್ರಮುಖ ಬ್ರ್ಯಾಂಡ್‌ಗಳನ್ನು ನೂತನ ಒಂದನೇ ಮಹಡಿಯಲ್ಲಿ ಕಾಣಬಹುದಾಗಿದ್ದು, ಮದುವೆ ಹಾಗೂ ಸಮಾರಂಭಗಳಿಗೆ ಬೇಕಾದ ಆಧುನಿಕ-ಪಾರಂಪರಿಕ ಶೈಲಿಯ ವಸ್ತ್ರಗಳು, ಆಫೀಸ್‌ವೇರ್‌, ಕ್ಯಾಶುಯಲ್‌ ವೇರ್‌, ಗ್ರಾಹಕರ ಅಭಿರುಚಿಗೆ ಅನುಸಾರವಾಗಿ ಸೂಟಿಂಗ್‌-ಶರ್ಟಿಂಗ್‌ ಹಾಗೂ ಪುರುಷರ ಒಳ ಉಡುಪುಗಳನ್ನು ಒಳಗೊಂಡ ವಿಶಾಲ ವಿಭಾಗ ಇದಾಗಿದೆ. ಇನ್ನು ಈ ಸಂಸ್ಥೆಯ 3ನೇ ಮಹಡಿಯಲ್ಲಿ ಈಗಾಗಲೇ ಮಕ್ಕಳು ಹಾಗೂ ಮಹಿಳೆಯರಿಗೆ ಬೇಕಿರುವ ವಸ್ತ್ರಗಳಿದ್ದು, 2ನೇ ಮಹಡಿಯಲ್ಲಿ ಸೀರೆಗಳ ಅಪಾರ ಸಂಗ್ರಹವಿದೆ. ಇನ್ನು ಈ ಉದ್ಘಾಟನಾ ಕಾರ್ಯಕ್ರಮದ ಮೂಲ ವಿಶೇಷತೆ, ಸಂಸ್ಥೆಯ ಅಭಿವೃದ್ಧಿ ಪಥದಲ್ಲಿ ಗ್ರಾಹಕರು ನೀಡಿದ ಸಹಕಾರದ ಹಿನ್ನೆಲೆಯಲ್ಲಿ ಅಂದು ಬೆಳಗ್ಗೆ ಸೇರುವ ಗ್ರಾಹಕರೇ ಉದ್ಘಾಟನೆ ನೆರವೇರಿಸುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪ್ರವರ್ತಕರಾದ ಲಕ್ಷ್ಮಣ ವಾಗ್ಲೆ, ರಮೇಶ್‌ ವಾಗ್ಲೆ, ಹರೀಶ್‌ ವಾಗ್ಲೆ ಉಪಸ್ಥಿತರಿದ್ದರು.

- Advertisement -

Latest News

error: Content is protected !!