Wednesday, June 24, 2026
Homeತಾಜಾ ಸುದ್ದಿಮತಎಣಿಕೆ ಕೇಂದ್ರದಿಂದ ಹೊರನಡೆದ ವಿನೇಶ್ ಫೋಗಾಟ್!

ಮತಎಣಿಕೆ ಕೇಂದ್ರದಿಂದ ಹೊರನಡೆದ ವಿನೇಶ್ ಫೋಗಾಟ್!

- Advertisement -
- Advertisement -

ಚಂಡೀಗಢ್:‌ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಯಾಗಿ ಹರ್ಯಾಣ ವಿಧಾನಸಭೆಯ ಜುಲಾನಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ವಿನೇಶ್‌ ಫೋಗಾಟ್‌ ಮತ್ತು ಪ್ರತಿಸ್ಪರ್ಧಿ ಭಾರತೀಯ ಜನತಾ ಪಕ್ಷದ ಕ್ಯಾಪ್ಟನ್‌ ಯೋಗೇಶ್‌ ಬೈರಾಗಿ ತೀವ್ರ ಪೈಪೋಟಿ ನಡೆದಿದೆ ಎನ್ನಲಾಗಿದೆ.

ಹರ್ಯಾಣ ವಿಧಾನಸಭಾ ಚುನಾವಣೆಯ ಮತಎಣಿಕೆಯು ಅ.08 ಮಂಗಳವಾರದಂದು ಬೆಳಗ್ಗೆ 8ಗಂಟೆಗೆ ಆರಂಭಗೊಂಡಿದ್ದು, ಮೊದಲ ಸುತ್ತಿನ ಮತಎಣಿಕೆಯಲ್ಲಿ ಕಾಂಗ್ರೆಸ್‌ ನ ವಿನೇಶ್‌ ಫೋಗಾಟ್‌, ಬಿಜೆಪಿಯ ಯೋಗೇಶ್‌ ಅವರಿಗಿಂತ ಕೇವಲ 200 ಮತಗಳ ಅಂತರದ ಮುನ್ನಡೆ ಸಾಧಿಸಿದ್ದರು. ಆದರೆ 2ನೇ ಸುತ್ತಿನ ಮತಎಣಿಕೆಯಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಕ್ಯಾಪ್ಟನ್‌ ಬೈರಾಗಿ ಅವರು ಕಾಂಗ್ರೆಸ್‌ ನ ವಿನೇಶ್‌ ಫೋಗಾಟ್‌ ಅವರಿಗಿಂತ ಎರಡು ಸಾವಿರ ಮತಗಳ ಅಂತರದ ಮುನ್ನಡೆ ಸಾಧಿಸಿದ್ದು ನಾಲ್ಕನೇ ಸುತ್ತಿನ ಮತಎಣಿಕೆಯಲ್ಲೂ ಕಾಂಗ್ರೆಸ್‌ ನ ವಿನೇಶ್‌ ಫೋಗಾಟ್‌ 3,000 ಮತಗಳ ಹಿನ್ನಡೆ ಕಂಡಿದ್ದು, ಬಿಜೆಪಿಯ ಕ್ಯಾಪ್ಟನ್‌ ಬೈರಾಗಿ ಮುನ್ನಡೆ ಕಾಯ್ದುಕೊಂಡಿದ್ದಾರೆ.

ವಿನೇಶ್ ಫೋಗಾಟ್ ಹಿನ್ನಡೆ ಅನುಭವಿಸುತ್ತಿರುವುದನ್ನು ಕಂಡು ಮತಎಣಿಕೆ ಕೇಂದ್ರದಿಂದ ಹೊರ ನಡೆದಿರುವುದಾಗಿ ವರದಿ ತಿಳಿಸಿದೆ. 90 ಸದಸ್ಯರ ಬಲದ ಹರ್ಯಾಣ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ 48 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಕಾಂಗ್ರೆಸ್‌ ಪಕ್ಷವು 35 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ತೀವ್ರ ಹಿನ್ನಡೆ ಅನುಭವಿಸಿದೆ ಎಂದು ತಿಳಿದು ಬಂದಿದೆ. 

- Advertisement -

Latest News

error: Content is protected !!