Thursday, June 4, 2026
Homeಕರಾವಳಿಉಡುಪಿಉಡುಪಿ ಮೂಲದ ಮಹಿಳಾ ಟೆಕ್ಕಿ ಬೆಂಗಳೂರಿನಲ್ಲಿ ಆತ್ಮಹತ್ಯೆ

ಉಡುಪಿ ಮೂಲದ ಮಹಿಳಾ ಟೆಕ್ಕಿ ಬೆಂಗಳೂರಿನಲ್ಲಿ ಆತ್ಮಹತ್ಯೆ

- Advertisement -
- Advertisement -

ಬೆಂಗಳೂರು : ಉಡುಪಿ ಮೂಲದ ಮಹಿಳಾ ಟೆಕ್ಕಿ ಬೆಂಗಳೂರಿನಲ್ಲಿ ಆತ್ಮಹತ್ಯೆ ಶರಣಾಗಿರುವ ಘಟನೆ ಬೆಂಗಳೂರಿನ ವಿವೇಕ ನಗರದಲ್ಲಿ ನಡೆದಿದೆ. ಮೇಘನಾ ಶೆಟ್ಟಿ (27) ಮೃತ ಟೆಕ್ಕಿ.

ಮೃತ ಮೇಘನಾ ಶೆಟ್ಟಿ ಉಡುಪಿ ಜಿಲ್ಲೆಯ ಕುಂದಾಪುರ ಮೂಲದವರಾಗಿದ್ದು  ಎರಡು ವರ್ಷದ ಹಿಂದೆ ತೀರ್ಥಹಳ್ಳಿಯ ಸುದೀಪ್ ಶೆಟ್ಟಿ ಜೊತೆ ವಿವಾಹವಾಗಿತ್ತು. ಮೇಘನಾ ಶೆಟ್ಟಿ ಪತಿ ಸುದೀಪ್ ಸಹ ಇಂಜಿನಿಯರ್ ಆಗಿದ್ದಾರೆ.

ಇತ್ತೀಚೆಗೆ ಪದೇಪದೇ ಹಣಕ್ಕಾಗಿ ಪತಿ ಕುಟುಂಬದಿಂದ ಕಿರುಕುಳ ಆರೋಪ ಕೇಳಿ ಬಂದಿದೆ. ನಿನ್ನೆ ರಾತ್ರಿ ಕೂಡ ಇದೇ ವಿಚಾರಕ್ಕೆ ದಂಪತಿಯ ನಡುವೆ ಗಲಾಟೆ ನಡೆದಿತ್ತು. ಆದರೆ ಇಂದು ಬೆಳಿಗ್ಗೆ ಕಿಟಕಿಗೆ ನೇಣುಬಿಗಿದುಕೊಂಡ ಸ್ಥಿತಿಯಲ್ಲಿ ಮೇಘನಾ ಶವ ಪತ್ತೆಯಾಗಿದೆ.ಮೇಘನಾ ಪೋಷಕರಿಂದ ಪತಿ ಸುದೀಪ್ ಶೆಟ್ಟಿ ವಿರುದ್ಧ ಕೊಲೆ ಆರೋಪ ಕೇಳಿಬಂದಿದೆ. ಘಟನಾ ಸ್ಥಳಕ್ಕೆ ವಿವೇಕನಗರ ಠಾಣೆಯ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!