Tuesday, June 9, 2026
Homeಕರಾವಳಿಮಂಗಳೂರುಬೆಳ್ತಂಗಡಿ : ಮರದಿಂದ ಬಿದ್ದು ವ್ಯಕ್ತಿ ಸಾವು

ಬೆಳ್ತಂಗಡಿ : ಮರದಿಂದ ಬಿದ್ದು ವ್ಯಕ್ತಿ ಸಾವು

- Advertisement -
- Advertisement -

ಬೆಳ್ತಂಗಡಿ: ವ್ಯಕ್ತಿಯೊಬ್ಬರು ಮರದಿಂದ ಬಿದ್ದು ಸಾವನ್ನಪ್ಪಿದ ಘಟನೆ ಬೆಳ್ತಂಗಡಿ ತಾಲೂಕಿನ ಪುದುವಟ್ಟಿನ ಮಿಯಾರ್ ನಲ್ಲಿ ಆ.4 ರಂದು ನಡೆದಿದೆ.

ಬೆಳ್ತಂಗಡಿ ತಾಲೂಕಿನ ಶಿಶಿಲದ ಕಾರೆಗುಡ್ಡೆ ನಿವಾಸಿ ಪ್ರವೀಣ್ (35) ಮೃತಪಟ್ಟವರು. ಮಿಯಾರ್ ಸಮೀಪ ಕೂಲಿ ಕೆಲಸಕ್ಕೆಂದು ಆಗಮಿಸಿದ ಇವರು ಮರದ ಕೊಂಬೆ ಕಡಿಯುತ್ತಿದ್ದಾಗ ಮರದಲ್ಲೇ ಅಸ್ವಸ್ಥಗೊಂಡು ಕೆಳಗೆ ಬಿದ್ದಿದ್ದಾರೆ. ತಕ್ಷಣ ಅಲ್ಲಿದ್ದವರು  ಬೆಳ್ತಂಗಡಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಆದರೆ ಅಷ್ಟೊತ್ತಿಗಾಗಲೇ ಅವರು ಮೃತ ಪಟ್ಟಿದ್ದಾರೆ. ಮೃತರಿಗೆ ಮದುವೆಯಾಗಿದ್ದು ಪತ್ನಿ ಇಬ್ಬರು ಮಕ್ಕಳು ಸೇರಿದಂತೆ ತಂದೆ ತಾಯಿಯನ್ನು ಅಗಲಿದ್ದಾರೆ. ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!