Sunday, June 7, 2026
Homeಕರಾವಳಿಉಡುಪಿಮಂಗಳೂರಿನಲ್ಲಿ ದಂಡಕ್ಕೆ ಬಗ್ಗದ ಚಾಲಕರು; ನಿಷೇಧದ ಬಳಿಕವೂ ಕರ್ಕಶ ಹಾರ್ನ್ ಬಳಕೆ; ಕೇಸು, ದಂಡಕ್ಕೆ ಕ್ಯಾರೇ...

ಮಂಗಳೂರಿನಲ್ಲಿ ದಂಡಕ್ಕೆ ಬಗ್ಗದ ಚಾಲಕರು; ನಿಷೇಧದ ಬಳಿಕವೂ ಕರ್ಕಶ ಹಾರ್ನ್ ಬಳಕೆ; ಕೇಸು, ದಂಡಕ್ಕೆ ಕ್ಯಾರೇ ಅನ್ನುತ್ತಿಲ್ಲ!

- Advertisement -
- Advertisement -

ಮಂಗಳೂರು: ನಗರದ ವಾಹನ ಚಾಲಕರಿಂದ ಕರ್ಕಶ ಹಾರ್ನ್ ಹಾವಳಿ ಮುಂದುವರಿದಿದ್ದು, ಚಾಲಕರು ಪೊಲೀಸರ ಕೇಸು, ದಂಡಕ್ಕೆ ಕ್ಯಾರೇ ಅನ್ನುತ್ತಿಲ್ಲ! ಎನ್ನುವ ಮಾತುಗಳು ಪೊಲೀಸರಿಂದ ಕೇಳಿಬರುತ್ತಿದೆ.

ಸಿಟಿ, ಸರ್ವಿಸ್‌, ಎಕ್ಸ್‌ಪ್ರೆಸ್‌ ಸಹಿತ ಖಾಸಗಿ ಬಸ್‌ಗಳ ಕೊಡುಗೆ ಕರ್ಕಶ ಹಾರ್ನ್ ಬಳಕೆ ಯಲ್ಲಿ ಹೆಚ್ಚಾಗಿದೆ. ಬಸ್‌ಗಳ ಚಾಲಕರು ಸಮಯದ ಅಭಾವ, ಟ್ರಾಫಿಕ್‌ ಜಾಮ್‌ ಮೊದಲಾದ ಕಾರಣಗಳನ್ನು ಮುಂದಿಟ್ಟುಕೊಂಡು, ಕರ್ಕಶ ಹಾರ್ನ್ ಬಳಕೆಯನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಬಸ್‌ ಮಾತ್ರವಲ್ಲದೆ, ಇತರ ಕೆಲವು ವಾಹನಗಳಲ್ಲಿಯೂ ಕರ್ಕಶ ಹಾರ್ನ್ ಬಳಕೆ ನಿರಾತಂಕವಾಗಿ ಮುಂದುವರಿದಿದೆ ಎನ್ನುವುದು ಅನೇಕ ಮಂದಿ ಇತರ ವಾಹನ ಸವಾರರು, ಚಾಲಕರು, ಸವಾರರ ದೂರು.

ಇನ್ನು ಕೆಲವು ಚಾಲಕರುಪೊಲೀಸರ ಕಣ್ತಪ್ಪಿಸಿ ಕರ್ಕಶ ಹಾರ್ನ್‌ಗಳ ಬಳಕೆ ಮಾಡುತ್ತಿದ್ದು, ರಾಜಾರೋಷವಾಗಿ ಯಾವುದೇ ಅಂಜಿಕೆ ಹಿಂಜರಿಕೆ ಇಲ್ಲದೆ ಎಲ್ಲೆಡೆಯೂ ಕರ್ಕಶ ಹಾರ್ನ್ ಬಳಕೆ ಮಾಡುತ್ತಿದ್ದಾರೆ.. ಇನ್ನು ಕೆಲವು ಚಾಲಕರು ಸಾಮಾನ್ಯವಾಗಿ ಪೊಲೀಸರು ಇರಬಹುದಾದ ಸ್ಥಳದಲ್ಲಿ ಎಚ್ಚರ ವಹಿಸುತ್ತಾರೆ ಬಿಟ್ಟರೆ ಉಳಿದಂತಹ ಕಡೆಗಳಲ್ಲಿ ಬಳಕೆ ಮಾಡುತ್ತಾರೆ.

ಪೊಲೀಸರು ಇಂತಹ ವಾಹನಗಳ ಕರ್ಕಶ ಹಾರ್ನ್ ಗಳನ್ನು ಕಿತ್ತೆಸೆದರೆ ಮತ್ತೆ ಚಾಲಕರು ಸಿಕ್ಕಿಸುತ್ತಾರೆ! ಕಡಿಮೆ ಬೆಲೆಗೆ ಇಂತಹ ಹಾರ್ನ್ ಗಳು ದೊರೆಯುತ್ತಿರುವುದು ಕೂಡ ಚಾಲಕರಿಗೆ ಅನುಕೂಲವಾಗಿದೆ.

- Advertisement -

Latest News

error: Content is protected !!