Wednesday, June 3, 2026
Homeಕರಾವಳಿಸುಳ್ಯ; ಬಾಲಕನ ಮರ್ಮಾಂಗವನ್ನು ಹಿಡಿದು ಎಳೆದ ಸಹಪಾಠಿಗಳು; ವಿದ್ಯಾರ್ಥಿಗೆ ಮಂಗಳೂರಿನಲ್ಲಿ ಚಿಕಿತ್ಸೆ

ಸುಳ್ಯ; ಬಾಲಕನ ಮರ್ಮಾಂಗವನ್ನು ಹಿಡಿದು ಎಳೆದ ಸಹಪಾಠಿಗಳು; ವಿದ್ಯಾರ್ಥಿಗೆ ಮಂಗಳೂರಿನಲ್ಲಿ ಚಿಕಿತ್ಸೆ

- Advertisement -
- Advertisement -

ಸುಳ್ಯ; ಸಹಪಾಠಿಗಳು ಬಾಲಕನ ಮರ್ಮಾಂಗವನ್ನು ಹಿಡಿದು ಎಳೆದ ಪರಿಣಾಮ ಬಾಲಕ ಗಂಭೀರ ಗಾಯಗೊಂಡು ಆತನಿಗೆ ಕೊನೆಗೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಿದ ಘಟನೆ ನಡೆದಿದೆ.

ಸಂಪಾಜೆ ಹಾಸ್ಟೆಲ್ ನಲ್ಲಿದ್ದುಕೊಂಡು ಓದುತ್ತಿದ್ದ ಸಂಪಾಜೆಯ ಆಲಡ್ಕ ನಿವಾಸಿಯಾದ ಬಾಲಕನ ಮರ್ಮಾಂಗವನ್ನು ಆತನ ಸಹಪಾಠಿಗಳು ಕೆಲವು ದಿನಗಳ ಹಿಂದೆ ಹಿಡಿದು ಎಳೆದಿದ್ದರು. ಬಾಲಕ ಬಳಿಕ ಮೂತ್ರ ವಿಸರ್ಜನೆ ಮಾಡುವ ವೇಳೆ ನೋವಾಗುತ್ತಿದ್ದ ಕಾರಣ ಮನೆಗೆ ಬಂದಿದ್ದನೆನ್ನಲಾಗಿದೆ.

ಮೊದಲು ಯಾರೊಡನೆಯೂ ವಿಷಯ ತಿಳಿಸಿರಲಿಲ್ಲ. ಮರ್ಮಾಂಗ ಬಾತುಕೊಂಡಿದ್ದರಿಂದ ತಾಯಿಗೆ ಹೇಳಿದ್ದಾನೆ. ಬಳಿಕ ಮನೆಯವರು ಸುಳ್ಯದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು, ಅಲ್ಲಿಂದ ಪುತ್ತೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಪರೀಕ್ಷಿಸಿದ ವೈದ್ಯರ ಸಲಹೆ ಮೇರೆಗೆ ಮಂಗಳೂರಿನ ವೆನ್ಸಾಕ್ ಆಸ್ಪತ್ರೆಗೆ ದಾಖಲಿಸಲಾಯಿತೆಂದು ತಿಳಿದುಬಂದಿದೆ. ಅಲ್ಲಿ ಚಿಕಿತ್ಸೆ ಬಾಲಕನಿಗೆ ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ. ಈಗ ಬಾಲಕ ಚೇತರಿಸಿಕೊಳ್ಳುತ್ತಿದ್ದಾನೆ. ಸಂಪಾಜೆ ಪೋಲೀಸ್ ಹೊರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!