Wednesday, June 3, 2026
Homeಉತ್ತರ ಕನ್ನಡಕಾರವಾರದಲ್ಲಿ ಉದ್ಯಮಿಯ ಬರ್ಬರ  ಹತ್ಯೆ

ಕಾರವಾರದಲ್ಲಿ ಉದ್ಯಮಿಯ ಬರ್ಬರ  ಹತ್ಯೆ

- Advertisement -
- Advertisement -

ಕಾರವಾರ; ಉದ್ಯಮಿಯೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ  ಘಟನೆ ಕಾರವಾರದ ಹಣಕೋಣ ಗ್ರಾಮದಲ್ಲಿ ಭಾನುವಾರ ನಸುಕಿನ ಜಾವ ನಡೆದಿದೆ.ವಿನಾಯಕ ನಾಯ್ಕ ಯಾನೆ ರಾಜು ನಾಯ್ಕ (58) ಕೊಲೆಯಾದ ಉದ್ಯಮಿ.


ಮಹಾರಾಷ್ಟ್ರದ ಪುಣೆಯಲ್ಲಿ ಎಲೆಕ್ಟ್ರಾನಿಕ್ ವಸ್ತುಗಳ ಆಮದು, ರಫ್ತು ವಹಿವಾಟು ನಡೆಸುತ್ತಿರುವ ವಿನಾಯಕ ನಾಯ್ಕ ಉದ್ಯಮಿ ಹಣಕೋಣಕ್ಕೆ ವಾರದ ಹಿಂದೆ ಬಂದಿದ್ದರು. ಭಾನುವಾರ ಪುಣೆಗೆ ಹೊರಡಲು ಸಿದ್ದರಾಗಿದ್ದರು. ನಸುಕಿನ ಜಾವ 5.30ರ ಸುಮಾರಿಗೆ ಅವರ ಹತ್ಯೆ ಮಾಡಲಾಗಿದೆ. ‘ನಾಲ್ಕರಿಂದ ಐದು ಜನರಿದ್ದ ಗುಂಪೊಂದು ಮನೆಗೆ ನುಗ್ಗಿ ಕೃತ್ಯ ನಡೆಸಿದೆ. ವಿನಾಯಕ ಅವರ ಪತ್ನಿ ವೃಶಾಲಿ ಅವರ ಮೇಲೆಯೂ ಹಲ್ಲೆ ನಡೆಸಲಾಗಿದೆ. ಇವರಿಬ್ಬರೇ ಮನೆಯಲ್ಲಿದ್ದರು’ ಎಂದು ಚಿತ್ತಾಕುಲ ಠಾಣೆ ಪೊಲೀಸರು ತಿಳಿಸಿದ್ದಾರೆ.

- Advertisement -

Latest News

error: Content is protected !!