Wednesday, June 24, 2026
Homeಕರಾವಳಿಉಡುಪಿತಿರುಪತಿ ದೇವಾಲಯದ ಆಡಳಿತ ಸರ್ಕಾರದ ಸ್ವಾಧೀನದಿಂದ ಮುಕ್ತಗೊಳಿಸಿ ಹಿಂದೂಗಳ ಸಂಸ್ಥೆಗೆ ನೀಡಬೇಕು; ಪೇಜಾವರ ಶ್ರೀ ಆಗ್ರಹ

ತಿರುಪತಿ ದೇವಾಲಯದ ಆಡಳಿತ ಸರ್ಕಾರದ ಸ್ವಾಧೀನದಿಂದ ಮುಕ್ತಗೊಳಿಸಿ ಹಿಂದೂಗಳ ಸಂಸ್ಥೆಗೆ ನೀಡಬೇಕು; ಪೇಜಾವರ ಶ್ರೀ ಆಗ್ರಹ

- Advertisement -
- Advertisement -

ಅಯೋಧ್ಯಾ: ತಿರುಪತಿ ಲಡ್ಡು ಪ್ರಸಾದಕ್ಕೆ ಹಸುವಿನ ತುಪ್ಪದ ಬದಲು ಕೃತಕ ತುಪ್ಪ ಹಾಕಿದ್ದು, ಅದನ್ನು ತುಪ್ಪ ಎಂದು ಕರೆಯಲು ಸಾಧ್ಯವಿಲ್ಲ ಎಂದು ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ.

ಅಯೋಧ್ಯೆಯಿಂದ ಹೇಳಿಕೆ ಬಿಡುಗಡೆ ಮಾಡಿರುವ ಪೇಜಾವರ ಶ್ರೀ, ಪ್ರಾಣಿಜನ್ಯ ಕೊಬ್ಬಿನ ಮಿಶ್ರಣದಿಂದ ಪ್ರಸಾದ ತಯಾರಿಸಿರುವ ಬೆಳವಣಿಗೆಯಿಂದ ಖೇದವಾಗಿದೆ ಎಂದು ಹೇಳಿದ್ದಾರೆ.

ಮೀನಿನ ಎಣ್ಣೆ, ಪ್ರಾಣಿಗಳ ಕೊಬ್ಬು ಬಳಸಿರುವುದು
ಹಿಂದೂ ಸಮಾಜಕ್ಕೆ ಮತ್ತು ದೇವರಿಗೆ ಬಗೆದಿರುವ ದೊಡ್ಡ ಅಪಚಾರ ಎಂದು ಹೇಳಿರುವ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ,
ಸರ್ಕಾರವೇ ಈ ಕೃತ್ಯ ನಡೆಸಿರುವುದು ಖಂಡನಾರ್ಹ ಎಂದು ಹೇಳಿದ್ದಾರೆ.

ಪ್ರಾಣಿಗಳ ಕೊಬ್ಬಿನ ಪ್ರಸಾದ ನೀಡಿರುವುದು
ಹಿಂದುಗಳ ಧಾರ್ಮಿಕ ಶ್ರದ್ಧೆಯ ಮೇಲಿನ ಹಲ್ಲೆ ಎಂದು ಹೇಳಿರುವ ಪೇಜಾವರ ಸ್ವಾಮೀಜಿ, ಧಾರ್ಮಿಕ ಶ್ರದ್ಧಾ ಕೇಂದ್ರಗಳು ಸರ್ಕಾರದ ಹಿಡಿತದಲ್ಲಿ ಇರದೇ ಹಿಂದೂ ಸಮಾಜದ ಕೈಯಲ್ಲಿರಬೇಕು ಎಂದಿದ್ದಾರೆ.

ಅಲ್ಲದೇ, ಕೂಡಲೇ ತಿರುಪತಿ ದೇವಾಲಯದ ಆಡಳಿತವನ್ನು ಸರ್ಕಾರದ ಸ್ವಾಧೀನದಿಂದ ಮುಕ್ತಗೊಳಿಸಿ ಹಿಂದೂಗಳ ಸಂಸ್ಥೆಗೆ ನೀಡಬೇಕು ಎಂದೂ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಆಗ್ರಹಿಸಿದ್ದಾರೆ.

- Advertisement -

Latest News

error: Content is protected !!