- Advertisement -
![]()
- Advertisement -
ಬೆಳ್ತಂಗಡಿ: ಇಲ್ಲಿನ ಸಿಯೋನ್ ಆಶ್ರಮದಲ್ಲಿ ಡೆಂಗ್ಯೊ ನಿರ್ಮೂಲನ ದಿನವನ್ನು 2024 ಸೆ.19 ಗುರುವಾರದಂದು ಆಚರಿಸಲಾಯಿತು. ಈ ಕಾರ್ಯಕ್ರಮವನ್ನು ಸಂಸ್ಥೆಯ ಮ್ಯಾನೆಜಿಂಗ್ ಟ್ರಸ್ಟಿಯವರಾದ ಡಾ. ಯು.ಸಿ ಪೌಲೊಸ್ ರವರು ಉದ್ಘಾಟಿಸಿ ಡೆಂಗ್ಯೊ ನಿರ್ಮೂಲನೆ ಮತ್ತು ಸ್ವಚ್ಚತೆಯ ಬಗ್ಗೆ ವಿವರಿಸಿದರು. ತದನಂತರ ಆಶ್ರಮ ನಿವಾಸಿಗಳಿಂದ ಆಶ್ರಮದ ಸುತ್ತಮುತ್ತಲಿನ ಸ್ವಚ್ಚತೆಯನ್ನು ನೆರವೇರಿಸಿದರು.
ಈ ಸಂದರ್ಭದಲ್ಲಿ, ಸಿಯೋನ್ ಆಶ್ರಮದ ವೈದ್ಯರಾದ ಡಾ. ಶಿವಾನಂದ ಸ್ವಾಮಿ, ಟ್ರಸ್ಟೀ ಸದಸ್ಯರುಗಳು, ಕುಟುಂಬಸ್ಥರು, ಸಿಬ್ಬಂದಿವರ್ಗದವರು, ಆಶ್ರಮ ನಿವಾಸಿಗಳು ಉಪಸ್ಥಿತರಿದ್ದರು.
- Advertisement -


