- Advertisement -
![]()
- Advertisement -
ಬೆಂಗಳೂರು; ಮೊನ್ನೆಯಷ್ಟೇ ಲಕ್ಷ್ಮೀ ಬಾರಮ್ಮ ಧಾರವಾಹಿ ಖ್ಯಾತಿಯ ಕವಿತಾ ಗೌಡ ಅವರ ಸೀಮಂತ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿತ್ತು. ಅನೇಕ ತಾರೆಯರು ಅವರಿಗೆ ಶುಭಾಶಯಗಳ ಮಹಾಪೂರವನ್ನೇ ಹರಿಸಿದ್ದರು.ಸೀಮಂತ ಆಗಿ ಕೇವಲ ಎರಡು ದಿನಗಳಲ್ಲೇ ಕವಿತಾ ಗೌಡ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

ಹೌದು.. ಈ ಸಂತಸದ ಸುದ್ದಿಯನ್ನು ಕವಿತಾ ಗೌಡ ಪತಿ ನಟ ಚಂದನ್ ಕುಮಾರ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಮಗುವಿನ ಕಾಲಿನ ಫೋಟೋ ಹಾಕಿರುವ ಅವರು ನಮ್ಮ ಮುದ್ದು ಕಂದಮ್ಮ ಧರೆಗಿಳಿದಿದ್ದಾನೆ ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ. ಇದೀಗ ಜೋಡಿಗೆ ಅಭಿಮಾನಿಗಳು ಶುಭಾಶಯಗಳ ಸುರಿಮಳೆ ಸುರಿಸಿದ್ದಾರೆ.
- Advertisement -


