Saturday, June 6, 2026
Homeಕರಾವಳಿಉಡುಪಿಉಡುಪಿ: ಬಿಜೆಪಿ ಶಾಸಕರ ಜೊತೆ ಭೇಟಿ ಹಿನ್ನೆಲೆ; ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸ್ಥಾನದ ಅಭ್ಯರ್ಥಿ ಅರ್ಜುನ್...

ಉಡುಪಿ: ಬಿಜೆಪಿ ಶಾಸಕರ ಜೊತೆ ಭೇಟಿ ಹಿನ್ನೆಲೆ; ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸ್ಥಾನದ ಅಭ್ಯರ್ಥಿ ಅರ್ಜುನ್ ನಾಯಿರಿ ವಿರುದ್ಧ ಕ್ರಮಕ್ಕೆ ಪತ್ರ

- Advertisement -
- Advertisement -

ಉಡುಪಿ: ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಚುನಾವಣಾ ಅಭ್ಯರ್ಥಿ ಅರ್ಜುನ್ ನಾಯಿರಿ ಅವರನ್ನು ಅನರ್ಹಗೊಳಿಸುವಂತೆ ಉಡುಪಿ ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲು ಒತ್ತಾಯಿಸಿದ್ದಾರೆ.

ಉಡುಪಿ ಶಾಸಕ ಯಶಪಾಲ್ ಸುವರ್ಣ ಜೊತೆಗಿನ ಭೇಟಿಯ ಪೋಟೋ ವೈರಲ್ ಆಗಿದ್ದ ಹಿನ್ನೆಲೆಯಲ್ಲಿ ಅಭ್ಯರ್ಥಿ ಅರ್ಜುನ್ ನಾಯಿರಿ ವಿರುದ್ಧ ಕ್ರಮ ಕೈಗೊಳ್ಳಲು ಕಿಶನ್ ಹೆಗ್ಡೆ ಕೊಳ್ಕೆಬೈಲು ಆಗ್ರಹಿಸಿದ್ದಾರೆ.

ಅರ್ಜುನ್ ನಾಯಿರಿ ವಿರುದ್ಧ
ಕೈಗೊಳ್ಳುವಂತೆ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸ್ಥಾನದ ಮತ್ತೋರ್ವ ಅಭ್ಯರ್ಥಿ ಕೃಷ್ಣಶೆಟ್ಟಿ ದೂರು ಸಲ್ಲಿಸಿದ ಹಿನ್ನೆಲೆಯಲ್ಲಿ ಯುವ ಕಾಂಗ್ರೆಸ್ ಚುನಾವಣಾ ಸಮಿತಿಯ ಪಿಆರ್ ಓ ಪ್ರಮೋದ್ ಕುಮಾರ್ ಗೆ ಪತ್ರ ಬರೆಯಲಾಗಿದೆ.

ಕೆಲವು ದಿನಗಳ ಹಿಂದೆ ಗಣೇಶೊತ್ಸವ ಸಮಿತಿ ಜೊತೆ ಅರ್ಜುನ್ ನಾಯಿರಿ ಶಾಸಕ ಯಶ್ ಪಾಲ್ ಸುವರ್ಣ ಅವರನ್ನು ಭೇಟಿಯಾಗಿದ್ದ
ಫೋಟೋ ವೈರಲ್ ಆದ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ.

- Advertisement -

Latest News

error: Content is protected !!