Wednesday, June 3, 2026
Homeಕರಾವಳಿಉಡುಪಿಉಡುಪಿ: ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ಕೊಲೆ ಆರೋಪಿ ದರ್ಶನ್ ಕೈದಿ ನಂಬರ್ ಟೀ ಶರ್ಟ್ ಧರಿಸಿ...

ಉಡುಪಿ: ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ಕೊಲೆ ಆರೋಪಿ ದರ್ಶನ್ ಕೈದಿ ನಂಬರ್ ಟೀ ಶರ್ಟ್ ಧರಿಸಿ ಪಾಲ್ಗೊಂಡ ಯುವಕರ ತಂಡ

- Advertisement -
- Advertisement -

ಉಡುಪಿ: ಗಣಪತಿ ಮೂರ್ತಿ ವಿಸರ್ಜನಾ ಮೆರವಣಿಗೆಯಲ್ಲಿ ಕೊಲೆ ಆರೋಪಿ ದರ್ಶನ್ ಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ವೇಳೆ ನೀಡಲ್ಪಟ್ಟಿದ್ದ ಕೈದಿ ನಂಬರ್ 6106 ರ ಬರಹದ ಟೀ ಶರ್ಟ್ ಧರಿಸಿ ಯುವಕರ ತಂಡವೊಂದು ಪಾಲ್ಗೊಂಡಿದ್ದ ಘಟನೆ ಉಡುಪಿ ಜಿಲ್ಲೆಯಲ್ಲಿ ನಡೆದಿದೆ.

ಕುಂದಾಪುರ ತಾಲೂಕಿನ ಬಳ್ಕೂರು ಸಾರ್ವಜನಿಕ ಗಣೇಶೋತ್ಸವದಲ್ಲಿ ಈ ಘಟನೆ ನಡೆದಿದ್ದು, ಕೈದಿ ನಂಬರ್ 6106 ಎಂದು ಬರೆದಿದ್ದ ಟೀ ಶರ್ಟ್ ಧರಿಸಿ ಚೊಂಗುಡ್ಡಿ ಫ್ರೆಂಡ್ಸ್ ಎಂಬ ತಂಡ ವಿಸರ್ಜನಾ ಮೆರವಣಿಗೆಯಲ್ಲಿ ಪಾಲ್ಗೊಂಡಿತ್ತು.

ಟೀ ಶರ್ಟ್ ನೋಡಿ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ್ದು, ಟೀ ಶರ್ಟ್ ತೆಗೆದು ಮೆರವಣಿಗೆಯಲ್ಲಿ ಪಾಲ್ಗೊಳ್ಳುವಂತೆ ಯುವಕರ ತಂಡಕ್ಕೆ ಸ್ಥಳೀಯರು ಆಗ್ರಹಿಸಿದ್ದಾರೆ.

ಆದರೆ ಸ್ಥಳೀಯರ ವಿರೋಧವನ್ನು ಲೆಕ್ಕಿಸದ ತಂಡ ಸಂವಿಧಾನದ 19 ನೇ ವಿಧಿ ನಮಗೆ ಸ್ವಾತಂತ್ರ್ಯ ನೀಡಿದೆ ಎಂದು ಗಲಾಟೆ ತೆಗೆದಿದೆ.ಈ ಹಂತದಲ್ಲಿ ಕೊಂಚ ಗಲಾಟೆ ಏರ್ಪಟ್ಟು ಕೊನೆಗೆ ಪೊಲೀಸರು ಪರಿಸ್ಥಿತಿಯನ್ನು ಶಾಂತಗೊಳಿಸಿದ್ದಾರೆ.

- Advertisement -

Latest News

error: Content is protected !!