Monday, June 8, 2026
Homeತಾಜಾ ಸುದ್ದಿಮಂಡ್ಯದಲ್ಲಿ ಗಣೇಶ ಮೂರ್ತಿಯನ್ನೇ ಕದ್ದ ಕಿಡಿಗೇಡಿಗಳು

ಮಂಡ್ಯದಲ್ಲಿ ಗಣೇಶ ಮೂರ್ತಿಯನ್ನೇ ಕದ್ದ ಕಿಡಿಗೇಡಿಗಳು

- Advertisement -
- Advertisement -

ಮಂಡ್ಯ : ಕಿಡಿಗೇಡಿಗಳು ತಡರಾತ್ರಿ ಗಣೇಶ ಮೂರ್ತಿಯನ್ನೇ ಕದ್ದು ಪರಾರಿಯಾಗಿರುವ ಘಟನೆ ಮಂಡ್ಯ ಜಿಲ್ಲೆಯ ಸೋಂಪುರದಲ್ಲಿ ನಡೆದಿದದೆ.

ಸೋಂಪುರದಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿತ್ತು. ಇಂದು ಅನ್ನಸಂತರ್ಪಣೆ ಬಳಿಕ ಗಣೇಶ ಮೂರ್ತಿಯನ್ನು ವಿಸರ್ಜನೆ ಮಾಡುವ ಪ್ಲಾನ್ ಮಾಡಿಕೊಳ್ಳಲಾಗಿತ್ತು.ಆದರೆ ತಡರಾತ್ರಿ ಕಿಡಿಗೇಡಿಗಳ ಗಣೇಶನ ಮೂರ್ತಿಯನ್ನು ಕದ್ದು ಪರಾರಿಯಾಗಿದ್ದಾರೆ.

ಗಣೇಶ ಮೂರ್ತಿಯನ್ನು ಕದ್ದು ಪರಾರಿಯಾಗಿರುವ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಮದ್ದೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!