Saturday, June 13, 2026
Homeಕರಾವಳಿಸುಳ್ಯ: ಸ್ಕೂಟಿ‌ ಮತ್ತು ರಿಕ್ಷಾ ನಡುವೆ ಡಿಕ್ಕಿ; ಐಟಿಐ ವಿದ್ಯಾರ್ಥಿ ಸಾವು

ಸುಳ್ಯ: ಸ್ಕೂಟಿ‌ ಮತ್ತು ರಿಕ್ಷಾ ನಡುವೆ ಡಿಕ್ಕಿ; ಐಟಿಐ ವಿದ್ಯಾರ್ಥಿ ಸಾವು

- Advertisement -
- Advertisement -

ಸುಳ್ಯ: ಮಾಣಿ-ಮೈಸೂರು ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿ ಐಟಿಐ ವಿದ್ಯಾರ್ಥಿ ಮೃತಪಟ್ಟಿರುವ ಘಟನೆ ಸುಳ್ಯ ಸಮೀಪ ಸಂಭವಿಸಿದೆ.

ಸುಳ್ಯ ಸಮೀಪದ ಪೆರಾಜೆಯಲ್ಲಿ ಸ್ಕೂಟಿ ಮತ್ತು ಆಟೋ ರಿಕ್ಷಾ ನಡುವೆ ಅಪಘಾತ ನಡೆದಿದ್ದು, ಸ್ಕೂಟಿ ಚಲಾಯಿಸುತ್ತಿದ್ದ ವಿದ್ಯಾರ್ಥಿ ನವೀನ್(23) ಮೃತಪಟ್ಟಿದ್ದಾರೆ.

ಮೃತ ನವೀನ್ ಮಡಿಕೇರಿ ತಾಲೂಕಿನ ಚೆಂಬು ಗ್ರಾಮದ ಕುದುರೆಪಾಯ ನಿವಾಸಿಯಾಗಿದ್ದು, ಸುಳ್ಯದಲ್ಲಿ ಐಟಿಐ ವಿದ್ಯಾರ್ಥಿಯಾಗಿದ್ದರು.

ಅಪಘಾತ ಸಂಭವಿಸಿದ ಕೂಡಲೇ ಗಂಭೀರವಾಗಿ ಗಾಯಗೊಂಡಿದ್ದ ನವೀನ್ ಅವರನ್ನು ಸುಳ್ಯದ ಆಸ್ಪತ್ರೆಗೆ ಕರೆ ತರಲಾಗಿತ್ತಾದರೂ ಫಲಕಾರಿಯಾಗಲಿಲ್ಲ.

- Advertisement -

Latest News

error: Content is protected !!