ಚೆನ್ನೈ: ರಾಕಿಂಗ್ ಸ್ಟಾರ್ ಯಶ್ ನಟನೆಯ ‘ಕಿರಾತಕ’ ಸಿನಿಮಾದಲ್ಲಿ ಹಳ್ಳಿ ಹುಡುಗಿಯ ಪಾತ್ರದಲ್ಲಿ ಮನೋಜ್ಞವಾಗಿ ನಟನೆ ಮಾಡಿದ್ದ, ದಕ್ಷಿಣ ಭಾರತ ಹೆಸರಾಂತ ನಟಿ ಓವಿಯಾ ಇದೀಗ ತನ್ನ ಬೋಲ್ಡ್ ಹೇಳಿಕೆಯ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ.

ಓವಿಯಾ ಸೋಷಿಯಲ್ ಮೀಡಿಯಾದಲ್ಲಿಯೂ ಸಖತ್ ಆ್ಯಕ್ಟಿವ್ ಆಗಿರುತ್ತಾರೆ. ಕೆಲದಿನಗಳ ಹಿಂದೆ ನಿಮ್ಮ ಶಾಲೆಯ ಬಗ್ಗೆ ಹೇಳಿ ಎಂದು ಅಭಿಮಾನಿ ಒಬ್ಬ ಕೇಳಿದ ಪ್ರಶ್ನೆಗೆ ಉತ್ತರಿಸಿದ ಓವಿಯಾ, ಶಾಲೆಗೆ ಹೋಗಿ ನನ್ನ ಸಮಯ ಹಾಗೂ ಹಣ ಹಾಳು ಮಾಡಿಕೊಂಡೆ ಎಂದೆನಿಸುತ್ತದೆ ಎಂದು ಹೇಳಿದ್ದರು.

ಇದೀಗ ಇದೇ ನಟಿಗೆ ಇತ್ತೀಚೆಗಷ್ಟೇ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಯೊಬ್ಬ ಪ್ರಶ್ನೆಯೊಂದನ್ನು ಕೇಳಿದ್ದ. ಆ ಪ್ರಶ್ನೆ ಮುಜುಗರಕ್ಕೀಡಾಗುವಂತದ್ದು. ಆದರೆ, ಅದ್ಯಾವುದನ್ನೂ ಲೆಕ್ಕಿಸದೇ ನೇರವಾಗಿ ಉತ್ತರಿಸಿ ನೆಟ್ಟಿಗರಿಂದ ಸೈ ಎನಿಸಿಕೊಂಡಿದ್ದಾರೆ.
‘ಹೆಣ್ಣುಮಕ್ಕಳ ಜೀವನ ಹಾಳು ಮಾಡುವ ಬದಲು, ಹಸ್ತಮೈಥುನ ಮಾಡಿಕೊಳ್ಳುವುದೇ ಉತ್ತಮ ಅಲ್ಲವೇ ಮೇಡಂ?’ ಎಂದು ಅಭಿಮಾನಿಯೊಬ್ಬ ಪ್ರಶ್ನೆ ಎಸೆದಿದ್ದ. ಅದಕ್ಕೆ ಅಷ್ಟೇ ಕೂಲ್ ಆಗಿ ಮತ್ತು ಯಾವುದೇ ಸಂಕೋಚಪಟ್ಟುಕೊಳ್ಳದೇ, ‘ನೀವು ಹೇಳಿದ್ದು ಸರಿಯಾಗಿಯೇ ಇದೆ..’ ಎಂದು ಪ್ರತಿಕ್ರಿಯಿಸಿದ್ದಾರೆ. ಅಷ್ಟೇ ಅಲ್ಲ ನಿಮಗೆ ಗಂಡನ ಬಗ್ಗೆ ಏನೆಲ್ಲ ಕಲ್ಪನೆ ಇದೆ ಎಂದಿದ್ದಕ್ಕೆ, ‘ನನಗೆ ಗಂಡನ ಅವಶ್ಯಕತೆ ಇಲ್ಲ..’ ಎಂದೂ ಅವರು ಉತ್ತರಿಸಿದ್ದಾರೆ.

ನಟಿ ಓವಿಯಾ ಅವರು ತೆಲುಗು, ತಮಿಳು, ಮಲಯಾಳಂ, ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಮಲಯಾಳಂ ಭಾಷೆಯಲ್ಲಿ ಪೋಷಕ ಪಾತ್ರಗಳನ್ನು ಮಾಡುತ್ತ ಓವಿಯಾ ಇಂದು ಹೀರೋಯಿನ್ ಆಗಿ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕೇರಳದ ಈ ಚೆಲುವೆ 2007ರಿಂದ ಇಲ್ಲಿಯವರೆಗೆ ನಟಿಸಿದ ಸಿನಿಮಾಗಳ ಸಂಖ್ಯೆ ಕಡಿಮೆ. ಓವಿಯಾ ಗಾಯಕಿಯಾಗಿಯೂ ಗುರುತಿಸಿಕೊಂಡಿದ್ದಾರೆ. 2014ರ ನಂತರ ಓವಿಯಾಗೆ ಸಣ್ಣ ಸಣ್ಣ ಸಿನಿಮಾಗಳಲ್ಲಿ ಗ್ಲಾಮರಸ್ ಪಾತ್ರ ಮಾಡುವ ಅವಕಾಶ ಸಿಕ್ಕಿತೇ ವಿನಃ ಇವರಿಗೆ ದೊಡ್ಡ ಬಜೆಟ್ ಸಿನಿಮಾಗಳಲ್ಲಿ ನಟಿಸಲು ಅಷ್ಟಾಗಿ ಸಾಧ್ಯವಾಗಲಿಲ್ಲ. 2019ರಲ್ಲಿ ಇವರ ನಟನೆಯ ‘ಕಲಾವಾಣಿ 2’ ಸಿನಿಮಾ ರಿಲೀಸ್ ಆಗಿತ್ತು.