Friday, June 5, 2026
Homeತಾಜಾ ಸುದ್ದಿಮದ್ಯಪಾನ ಮಾಡಿ ವಾಹನ ಚಾಲನೆ; ನ್ಯಾಯಾಲಯದಿಂದ ಚಾಲಕನಿಗೆ 10 ಸಾವಿರ ದಂಡ 

ಮದ್ಯಪಾನ ಮಾಡಿ ವಾಹನ ಚಾಲನೆ; ನ್ಯಾಯಾಲಯದಿಂದ ಚಾಲಕನಿಗೆ 10 ಸಾವಿರ ದಂಡ 

- Advertisement -
- Advertisement -

ತೀರ್ಥಹಳ್ಳಿ: ಆಗುಂಬೆ ಬಳಿಯಲ್ಲಿ ಕಾರು ಚಾಲಕನೋರ್ವ ಮದ್ಯಪಾನ ಮಾಡಿ ವಾಹನ ಚಲಾಯಿಸಿದ್ದು, ಕಾರು ಚಾಲಕನಿಗೆ ನ್ಯಾಯಾಲಯ ಹತ್ತು ಸಾವಿರ ದಂಡ ವಿಧಿಸಿರುವ ಘಟನೆ ಬೆಳಕಿಗೆ ಬಂದಿದೆ.

ಆಗುಂಬೆ ಪೊಲೀಸ್ ಸಬ್ ಇನ್ಸ್ಪೆಕ್ಟರ್ ರಂಗನಾಥ್ ಅಂತರಗಟ್ಟಿ ಮತ್ತು ತಂಡದವರಿಂದ ವಾಹನ ತಪಾಸಣೆ ನಡೆಯುತ್ತಿದ್ದು, ಈ ವೇಳೆ ಮದ್ಯಪಾನ ಮಾಡಿ ವಾಹನ ಚಲಾಯಿಸುತಿದ್ದ ಮಹೇಶ್ ಎಂಬ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು.

ಎಸ್.ಐ. ನಾಗೇಶ್, ದಿವಾಕರ್, ಅನಿಲ್ ರವರು ವಾಹನ ತಪಾಸಣೆ ಮಾಡುತ್ತಿದ್ದ ವೇಳೆ KA 05-AF-0250 ಸಂಖ್ಯೆಯ ಇನ್ನೋವಾ ಕಾರಿನ ಚಾಲಕ ಮಹೇಶ್ ಎಂಬಾತ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಿದ್ದು, ಪ್ರಕರಣ ದಾಖಲಿಸಿ ನ್ಯಾಯಲಯಕ್ಕೆ ವರದಿ ಮಾಡಿದ್ದ ಹಿನ್ನಲೆಯಲ್ಲಿ ದಿನಾಂಕ 27.08.2024 ರಂದು ಪ್ರಥಮ ದರ್ಜೆ ವ್ಯವಹಾರಗಳ ನ್ಯಾಯಾಲಯ ಮತ್ತು ಜೆಎಂಎಫ್‌ಸಿ ತೀರ್ಥಹಳ್ಳಿ ನ್ಯಾಯಲಯದ ನ್ಯಾಯಾಧೀಶರು 10.000 ರೂ ದಂಡ ವಿಧಿಸಿ ಆದೇಶಿಸಿದ್ದಾರೆ.

ಇದು ಆಗುಂಬೆ ಭಾಗದಲ್ಲಿ  ಒಂದೇ ತಿಂಗಳಿನಲ್ಲಿ ನಡೆದ ಮೂರನೇ ಪ್ರಕರಣವಾಗಿದೆ. ಸಾರ್ವಜನಿಕರು ಸಂಚಾರ ನಿಯಮ ಮೀರುವ ವಾಹನ ಸವಾರರಿಗೆ ಇನ್ನು ಕಠಿಣ ಕ್ರಮ ಜರುಗಿಸಲು ಒತ್ತಾಯಿಸಿದ್ದಾರೆ.

- Advertisement -

Latest News

error: Content is protected !!