Saturday, June 13, 2026
Homeಕರಾವಳಿಕಾಂಗ್ರೆಸ್ ಎಂಎಲ್ಸಿ ಐವನ್ ಡಿಸೋಜಾ ಮನೆ ಮೇಲೆ ಕಲ್ಲು ಎಸೆತ ಪ್ರಕರಣ: ಇಬ್ಬರು ಆರೋಪಿಗಳು ಎರೆಸ್ಟ್

ಕಾಂಗ್ರೆಸ್ ಎಂಎಲ್ಸಿ ಐವನ್ ಡಿಸೋಜಾ ಮನೆ ಮೇಲೆ ಕಲ್ಲು ಎಸೆತ ಪ್ರಕರಣ: ಇಬ್ಬರು ಆರೋಪಿಗಳು ಎರೆಸ್ಟ್

- Advertisement -
- Advertisement -

ಮಂಗಳೂರು; ಕಾಂಗ್ರೆಸ್ ಎಂಎಲ್ಸಿ ಐವನ್ ಡಿಸೋಜಾ ಮನೆ ಮೇಲೆ ಕಲ್ಲು ಎಸೆತ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಟ್ವಾಳ ತಾಲೂಕಿನ ಬೋಳಂತೂರಿನ ರಾಘವ ಭಂಡಾರಿ ಅವರ ಪುತ್ರ ಭರತ್ ಅಲಿಯಾಸ್ ರಕ್ಷಿತ್, ಹಾಗೂ ಬಂಟ್ವಾಳ ತಾಲೂಕಿನ ಕೋಲ್ನಾಡು ಗ್ರಾಮದ ಆನಂದ್ ಪೂಜಾರಿ ಪುತ್ರ ದಿನೇಶ್ ಕುರ್ತಾ ಬಂಧಿತ ಆರೋಪಿಗಳು.

ಸಿಸಿ ಕ್ಯಾಮೆರಾ ದೃಶ್ಯದ ಆಧಾರದಲ್ಲಿ ಇಬ್ಬರು ಆರೋಪಿಗಳನ್ನು ಇದೀಗ ಬಂಧಿಸಲಾಗಿದೆ. ರಾಜ್ಯಪಾಲರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಕ್ಕೆ ಎಂಎಲ್ಸಿ ಐವನ್ ಡಿಸೋಜಾ ಮನೆ ಮೇಲೆ ಕಲ್ಲು ತೂರಾಟ ನಡೆಸಿದ್ದರು.

ಕಾಂಗ್ರೆಸ್ ಎಂಎಲ್ಸಿ ಐವನ್ ಡಿಸೋಜಾ ಹೇಳಿಕೆಯಿಂದ ಕೋಪಗೊಂಡು ಕಲ್ಲೇಸೆದಿರುವಾಗಿ ಇದೀಗ ತಪ್ಪು ಒಪ್ಪಿಕೊಂಡಿದ್ದಾರೆ. ಪೊಲೀಸರ ವಿಚಾರಣೆ ಭರತ್ ಮತ್ತು ದಿನೇಶ್ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಭರತ್ ವಿರುದ್ಧ ಈ ಹಿಂದೆ ಹಲ್ಲೆ ಆರೋಪದ ಅಡಿ ಇದುವರೆಗೂ 3 ಪ್ರಕರಣಗಳು ದಾಖಲಾಗಿವೆ.

- Advertisement -

Latest News

error: Content is protected !!