ಚಿಕ್ಕಮಗಳೂರು ;ಸರ್ಕಾರದ ಹಣ ಫೋನ್ ಪೇ ಮೂಲಕ ಪ್ರಿಯತಮೆ ಖಾತೆಗೆ ವರ್ಗಾವಣೆ ಆರೋಪ ಹಾಗೂ ಆನ್ ಲೈನ್ ಟಿಕೆಟ್ ಫೋರ್ಜರಿ ಮಾಡಿದ ಆರೋಪದಡಿ ಕಳಸ ಅರಣ್ಯ ಇಲಾಖೆಯ ಡಿ.ಆರ್.ಎಫ್.ಓ. ಚಂದನ್ ಗೌಡರನ್ನು ಅಮಾನತು ಮಾಡಲಾಗಿದೆ.
ಕಳಸ ಅರಣ್ಯ ಇಲಾಖೆಯ ಡಿ.ಆರ್.ಎಫ್.ಓ. ಚಂದನ್ ಗೌಡ ಅವರು ಸರ್ಕಾರದ ಹಣವನ್ನು ದುರುಪಯೋಗಪಡಿಸಿಕೊಂಡು ಸದ್ಯಕ್ಕೆ 9 ಸಾವಿರ ರೂಪಾಯಿಗಳನ್ನು ತನ್ನ ಗೆಳತಿ ಮೋನಿಕ ಎಂಬವರ ಖಾತೆಗೆ ಹಾಕಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ರಾಣಿಝರಿ ಜಲಪಾತ, ಬಂಡಾಜೆ ಫಾಲ್ಸ್ ಬಳಿ ನಡೆದ ಟಿಕೆಟ್ ಗೋಲ್ ಮಾಲ್ ನಲ್ಲಿ ಚಂದನ್ ಭಾಗಿಯಾಗಿದ್ದಾರೆ ಎನ್ನಲಾಗಿದೆ.
ಚಂದನ್ ಆನ್ ಲೈನ್ ಟಿಕೆಟ್ ಫೋರ್ಜರಿ ಮಾಡಿ ಸರ್ಕಾರಕ್ಕೆ ಮೋಸ ಮಾಡಿದ್ದಾರೆ ಎನ್ನಲಾಗಿದ್ದು,ಸದ್ಯಕ್ಕೆ 9000 ಹಣವನ್ನ ಸರ್ಕಾರಕ್ಕೆ ಮೋಸ ಮಾಡಿರುವುದು ಸಾಬೀತಾಗಿದೆ. ಇಲಾಖೆಯ ಲಕ್ಷಗಟ್ಟಲೇ ಹಣ ಮೋನಿಕಾ ಎಂಬ ಯುವತಿ ಖಾತೆಗೆ ಜಮಾವಾಗಿರೋ ಅನುಮಾನ ವ್ಯಕ್ತವಾಗಿದೆ.
ಬಂಡಾಜೆ ಫಾಲ್ಸ್ ಬಳಿ 200ಕ್ಕೂ ಅಧಿಕ ಜನರಿಗೆ ಟಿಕೆಟ್ ಇಲ್ಲದೆ ಫಾಲ್ಸ್ ಗೆ ಭೇಟಿ ನೀಡಲು ಅವಕಾಶ ಕೊಡಲಾಗಿದೆ.ಇನ್ನು ಮದ್ಯಪಾನ ಚೆಕ್ ಮಾಡಲು ಹೋಗಿದ್ದ ಪೊಲೀಸರಿಗೆ ಪ್ರವಾಸಿಗರು ಟಿಕೆಟ್ ಇಲ್ಲದೇ ಬಂದಿರೋದು ಗೊತ್ತಾಗಿದೆ. ಜೂನ್ ತಿಂಗಳ ಆನ್ ಲೈನ್ ಟಿಕೆಟ್ ಬುಕ್ಕಿಂಗ್, ಪ್ರವಾಸಿಗರ ನೋಂದಣಿ ಪುಸ್ತಕಕ್ಕೂ ಸಂಬಂಧವೇ ಇಲ್ಲ ಅನ್ನೋ ಪರಿಶೀಲನೆಯಲ್ಲಿ ಬಯಲಾಗಿದೆ.ನಕಲಿ ಆನ್ ಲೈನ್ ಟಿಕೆಟ್ ಮುದ್ರಿಸಿ ಸರ್ಕಾರಕ್ಕೆ ಮೋಸ ಮಾಡಿರೋ ಬಗ್ಗೆ ಇಲಾಖೆಗೆ ಅನುಮಾನವಿದ್ದು ತನಿಖೆ ನಡೆಯುತ್ತಿದೆ.ಈ ಬೆನ್ನಲ್ಲೇ ಕೊಪ್ಪ ಡಿ.ಎಫ್.ಓ. ಉಪೇಂದ್ರ ಪ್ರತಾಪ್ ಸಿಂಗ್ ಕಳಸ ಅರಣ್ಯ ಇಲಾಖೆಯ ಡಿ.ಆರ್.ಎಫ್.ಓ. ಚಂದನ್ ಗೌಡ ಅವರನ್ನು ಅಮಾನತುಗೊಳಿಸಿ ಆದೇಶ ನೀಡಿದ್ದಾರೆ.