- Advertisement -
![]()
- Advertisement -
ಉಡುಪಿ; ಕ್ಷುಲಕ ಕಾರಣಕ್ಕೆ ಪತಿ ಹಾಗೂ ಪತ್ನಿ ನಡುವಿನ ಗಲಾಟೆ ಪತ್ನಿಯ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಸಾಲಿಗ್ರಾಮದ ಸಮೀಪದ ಕಾರ್ಕಳ ಕಡಿದ ಹೆದ್ದಾರಿ ಎಂಬಲ್ಲಿ ನಡೆದಿದೆ.ಜಯಶ್ರೀ (28) ಕೊಲೆಯಾದ ಮಹಿಳೆ. ಪತಿ ಕಿರಣ್ ಉಪಾಧ್ಯ ಕೊಲೆಗೈದ ಪತಿ.
ಸಾಲಿಗ್ರಾಮ ಸಮೀಪದವ ಕಾರ್ಕಡದ ಕಡಿದ ಹೆದ್ದಾರಿಯ ಅಂಗನವಾಡಿ ಕೇಂದ್ರದ ಬಳಿಯಲ್ಲಿರುವ ಬಾಡಿಗೆ ಮನೆಯಲ್ಲಿ ದಂಪತಿ ವಾಸವಾಗಿದ್ದರು. ಕಳೆದ ಎಂಟು ತಿಂಗಳ ಹಿಂದೆಯಷ್ಟೇ ದಂಪತಿಗೆ ಮದುವೆಯಾಗಿತ್ತು. ಇಂದು ಬೆಳಗ್ಗೆ ಗಂಡ ಹೆಂಡತಿಯ ನಡುವೆ ಜಗಳವಾಗಿದ್ದು, ಪತಿ ಕಿರಣ್ ಉಪಾಧ್ಯ ಕೊಲೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಇದೀಗ ಕೋಟ ಠಾಣೆಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ವಿಚಾರಣೆಯನ್ನು ನಡೆಸುತ್ತಿದ್ದಾರೆ. ಆದರೆ ಕೊಲೆ ನಿಖರವಾದ ಕಾರಣ ಏನೂ ಅನ್ನೋದು ತಿಳಿದು ಬಂದಿಲ್ಲ.
- Advertisement -


