Tuesday, June 30, 2026
Homeತಾಜಾ ಸುದ್ದಿಮೊನ್ನೆ ದರ್ಶನ್ ರನ್ನು ಭೇಟಿಯಾಗಿದ್ದ ನಟ ಚಿಕ್ಕಣ್ಣನಿಗೆ ಮತ್ತೆ ಸಂಕಷ್ಟ; ವಿಚಾರಣೆಗೆ ಹಾಜರಾಗುವಂತೆ ನೋಟಿಸ್

ಮೊನ್ನೆ ದರ್ಶನ್ ರನ್ನು ಭೇಟಿಯಾಗಿದ್ದ ನಟ ಚಿಕ್ಕಣ್ಣನಿಗೆ ಮತ್ತೆ ಸಂಕಷ್ಟ; ವಿಚಾರಣೆಗೆ ಹಾಜರಾಗುವಂತೆ ನೋಟಿಸ್

- Advertisement -
- Advertisement -

ಬೆಂಗಳೂರು: ಮೊನ್ನೆ ದರ್ಶನ್ ರನ್ನು ಭೇಟಿಯಾಗಿದ್ದ ನಟ ಚಿಕ್ಕಣ್ಣನಿಗೆ ಮತ್ತೆ ಸಂಕಷ್ಟ ಎದುರಾಗಿದೆ. ವಿಚಾರಣೆಗೆ ಹಾಜರಾಗುವಂತೆ ಚಿಕ್ಕಣ್ಣ ಅವರಿಗೆ ನೋಟಿಸ್ ನೀಡಲಾಗಿದೆ.

ಈ ಹಿಂದೆ ರೇಣುಕಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಟ ಚಿಕ್ಕಣ್ಣ ನ್ಯಾಯಾಧೀಶರ ಮುಂದೆ ಸೆಕ್ಷನ್ ಸಿಆರ್‌ಪಿಸಿ 164ರ ಅಡಿಯಲ್ಲಿ ಹೇಳಿಕೆ ನೀಡಿದ್ದರು.ಇದೀಗ ಮೊನ್ನೆ ಜೈಲಿನಲ್ಲಿರುವ ಆರೋಪಿ ನಟ ದರ್ಶನ್ ಭೇಟಿಯಾಗಿರುವುದು ಈಗ ಚಿಕ್ಕಣ್ಣನಿಗ ಕಂಟಕವಗಿ ಪರಿಣಮಿಸಿದೆ. ಸಾಧಾರಣವಾಗಿ ತನಿಖಾ ಹಂತದಲ್ಲಿರುವಾಗಲೇ ಸಾಕ್ಷಿಯಾದ ವ್ಯಕ್ತಿ ಜೈಲಿನಲ್ಲಿ ಆರೋಪಿಯನ್ನು ಭೇಟಿ ಮಾಡೋದು ಸರಿಯಲ್ಲ. ಹಾಗಾಗಿ  ಕಾನೂನಿನ ಅಡಿಯಲ್ಲಿ ಮತ್ತೆ ನಟ ಚಿಕ್ಕಣ್ಣ ಅವರಿಗೆ ನೋಟಿಸ್‌ ನೀಡಿದೆ ಎನ್ನಲಾಗಿದೆ.

ಯಾವ ಉದ್ದೇಶಕ್ಕೆ ಆರೋಪಿಯನ್ನು ಭೇಟಿಯಾಗಿದ್ದೀರಿ? ಆರೋಪಿ ಬಳಿ ಏನು ಮಾತನಾಡಿದ್ದೀರಿ ಎಂದು‌ ಚಿಕ್ಕಣ್ಣ ಅವರನ್ನು ಪೊಲೀಸರು ಪ್ರಶ್ನಿಸುವ ಸಾಧ್ಯತೆಯಿದೆ. ಸಾಕ್ಷಿಗಳ ಭೇಟಿಯನ್ನ ತಡೆಯಲು ನ್ಯಾಯಾಲಯದಲ್ಲಿ ಎಸ್‌ಐಟಿ ಮನವಿ ಮಾಡುವ ಸಾಧ್ಯತೆಯಿದೆ ಎನ್ನಲಾಗಿದೆ.

- Advertisement -

Latest News

error: Content is protected !!