Tuesday, June 30, 2026
Homeಉದ್ಯಮಸಮನ್ಸ್ ,ನೋಟೀಸ್ ಜಾರಿ ಕುರಿತು ಸುಪ್ರೀಂ ಕೋರ್ಟ್ ಮಹತ್ವದ ಪ್ರಕಟಣೆ

ಸಮನ್ಸ್ ,ನೋಟೀಸ್ ಜಾರಿ ಕುರಿತು ಸುಪ್ರೀಂ ಕೋರ್ಟ್ ಮಹತ್ವದ ಪ್ರಕಟಣೆ

- Advertisement -
- Advertisement -

ನವದೆಹಲಿ: ಭಾರತದಲ್ಲಿ ಮಾರಕ ಕರೊನಾ ಸೋಂಕಿನ ಹಿನ್ನೆಲೆಯಲ್ಲಿ ಕೋರ್ಟ್‌ಗಳು ಸಮನ್ಸ್ ಮತ್ತು ನೋಟಿಸ್‌ಗಳನ್ನು ಇಮೇಲ್, ವಾಟ್ಸ್‌ಆಯಪ್ ಮೂಲಕವೂ ಕಳುಹಿಸಬಹುದು. ಇದಕ್ಕೆ ಭೌತಿಕವಾಗಿ ಕಳುಹಿಸುವ ಸಮನ್ಸ್ ಮತ್ತು ನೋಟಿಸ್‌ಗೆ ಇರುವಷ್ಟೆ ಮಾನ್ಯತೆ ಇದೆ ಎಂದು ಸುಪ್ರೀಂಕೋರ್ಟ್ ಹೇಳಿದೆ.
ಕೊರೊನಾ ಎಲ್ಲ ಕ್ಷೇತ್ರಗಳ ಮೇಲೆ ಪರಿಣಾಮ ಬೀರಿದ್ದು, ಕೋರ್ಟ್ ಕಲಾಪಗಳು ಕೂಡಾ ಇದಕ್ಕೆ ಹೊರತಾಗಿಲ್ಲ. ಹೀಗಾಗಿ ಸಮನ್ಸ್ ಮತ್ತು ನೋಟಿಸ್ ಜಾರಿಗೊಳಿಸುವ ಕುರಿತಂತೆ ಸುಪ್ರೀಂ ಕೋರ್ಟ್ ಮಹತ್ವದ ತೀರ್ಮಾನ ಕೈಗೊಂಡಿದೆ.
ಕೊರೊನಾ ಕಾಲದಲ್ಲಿ ವ್ಯಕ್ತಿಗಳಿಗೆ ಸಮನ್ಸ್ ಅಥವಾ ನೋಟಿಸ್ ತಲುಪಿಸುವುದು ಕಷ್ಟಕರವಾಗಿರುವ ಕಾರಣ, ವಾಟ್ಸಾಪ್, ಇ-ಮೇಲ್, ಫ್ಯಾಕ್ಸ್ ಮೂಲಕವೂ ಇದನ್ನು ಕಳುಹಿಸಬಹುದಾಗಿದೆ ಎಂದು ತಿಳಿಸಿದೆ.
ವಾಟ್ಸಾಪ್ ಮೂಲಕ ಕಳುಹಿಸಿದ ವೇಳೆ ಅದರಲ್ಲಿ ಮೂಡುವ ಎರಡು ನೀಲಿ ರೈಟ್ ಮಾರ್ಕ್ ಸಮನ್ಸ್ ಅಥವಾ ನೋಟಿಸ್ ತಲುಪಿರುವುದಕ್ಕೆ ಪುರಾವೆ ಎಂದು ಪರಿಗಣಿಸಲಾಗುತ್ತದೆ. ಸುಪ್ರೀಂ ಕೋರ್ಟಿನ ಈ ತೀರ್ಮಾನದಿಂದಾಗಿ ನೋಟಿಸ್ ತಲುಪಿಲ್ಲ ಎಂಬ ಕಾರಣಕ್ಕಾಗಿ ಪ್ರಕರಣಗಳು ವಿಳಂಬವಾಗುವುದು ತಪ್ಪಿದಂತಾಗುತ್ತದೆ.

- Advertisement -

Latest News

error: Content is protected !!