- Advertisement -
- Advertisement -
ಬೆಂಗಳೂರು: ಕೊರೋನಾ ಸಂಕಷ್ಟದ ನಡುವೆಯೂ ದೇಶದ ನಾನಾ ನಗರಗಳಲ್ಲಿ ಟೊಮೆಟೊ ಬೆಲೆ ಗಗನಕ್ಕೇರಿದೆ. ಕಳೆದ ಕೆಲವು ವಾರಗಳಿಂದ ಸ್ಥಿರವಾಗಿ ಏರುತ್ತಿರುವ ಟೊಮೆಟೊ ದರ, ಇಂದು ಕೆ.ಜಿ.ಗೆ 60-70 ರೂಪಾಯಿಯಾಗಿದೆ.
ಮಳೆಗಾಲದಲ್ಲಿ ಟೊಮೆಟೊ ಹಾಳಾಗುವ ಸಾಧ್ಯತೆ ಇರುವುದರಿಂದ ಬೆಲೆ ಏರಿಕೆಯಾಗಿದೆ ಎನ್ನಲಾಗ್ತಿದೆ. ಒಂದು ತಿಂಗಳ ಹಿಂದೆ ಅದು ಕೆ.ಜಿ.ಗೆ ಸುಮಾರು 20 ರೂಪಾಯಿಗೆ ಮಾರಾಟವಾಗುತ್ತಿತ್ತು.
ಚೆನ್ನೈ ಹೊರತುಪಡಿಸಿ ಟೊಮೊಟೊ ಬೆಲೆ ಕೆ.ಜಿಗೆ 70-80 ರೂಪಾಯಿಗೆ ಮಾರಾಟವಾಗ್ತಿದೆ. ಬೆಂಗಳೂರಿನಲ್ಲಿ ಒಂದು ಕಿಲೋ ಟೊಮೆಟೊ ಬೆಲೆ 46 ರೂಪಾಯಿಯಾಗಿದೆ.
- Advertisement -