ಸ.ಕಿ.ಪ್ರಾ.ಶಾಲೆ, ಮಕ್ಕಿ ಇಲ್ಲಿ 78ನೇ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಬೆಳಿಗ್ಗೆ ಗಂಟೆ 8:30ಕ್ಕೆ ಸರಿಯಾಗಿ ಮೆರವಣಿಗೆ ಆರಂಭಗೊಂಡಿತು. ಆ ಬಳಿಕ ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಮುಕೇಶ್ ಇವರು ರಾಷ್ಟ್ರಧ್ವಜಾರೋಹಣವನ್ನು ನೆರವೇರಿಸಿದರು. ಅನಂತರ ಶಾಲೆಗೆ ವಿವಿಧ ರೀತಿಯ ಕೊಡುಗೆಗಳನ್ನು ಕೊಟ್ಟ ಮಹನೀಯರಿಗೆ ಅಭಿನಂದನಾ ಸಮಾರಂಭವನ್ನು ಆಯೋಜಿಸಲಾಗಿತ್ತು.

ಶಾಲೆಗೆ ಶಾಲೆಯ ನಲಿಕಲಿ ಘಟಕಕ್ಕೆ ಮೇಜುಗಳನ್ನು ಒದಗಿಸಿಕೊಟ್ಟ ಕೊಡುಗೈ ದಾನಿ ಜನಾರ್ಧನ ಶೇರಿಗಾರ್, ಶಾಲೆಗೆ ಕುರ್ಚಿಗಳನ್ನು ಕೊಡುಗೆಯಾಗಿ ನೀಡಿದ ಓಂ ಫ್ರೆಂಡ್ಸ್ ಮಕ್ಕಿ ಇದರ ಅಧ್ಯಕ್ಷರಾದ ಅಕ್ಷಯ್ ಮತ್ತು ಸುಲ್ತಾನ್ ಕ್ರಿಕೆಟರ್ಸ್ ಮಕ್ಕಿ ಇದರ ಅಧ್ಯಕ್ಷರಾದ ರಜಾಕ್ ಇವರಿಗೆ ಗೌರವಾರ್ಪಣೆ ಮತ್ತು ಸನ್ಮಾನವನ್ನು ಮಾಡಲಾಯಿತು. ಈ ಸಂದರ್ಭದಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷರಾದ ಮುಕೇಶ್, ಗ್ರಾಮ ಪಂಚಾಯತ್ ಶಿರ್ತಾಡಿ ಇದರ ಅಧ್ಯಕ್ಷರಾದ ಅಗ್ನೆಸ್ ಡಿಸೋಜಾ, ಗ್ರಾಮ ಪಂಚಾಯತ್ ಸದಸ್ಯರಾದ ಪ್ರವೀಣ್ ಕುಮಾರ್ ಮತ್ತು ಶೀನ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ಬೇಬಿ ಸ್ವಾಗತಿಸಿ ವಂದಿಸಿದರು. ಸಹ ಶಿಕ್ಷಕ ಗಣರಾಜ್ ನಿರೂಪಿಸಿದರು.


