- Advertisement -
![]()
- Advertisement -
ಚಿಕ್ಕಮಗಳೂರು : ಹುಡುಗಿಗಾಗಿ ಬುರ್ಖಾ ಧರಿಸಿ ಬಂದು ಯುವಕ ಸಿಕ್ಕಿ ಬಿದ್ದ ಘಟನೆ ಚಿಕ್ಕಮಗಳೂರು ನಗರ ಮಲ್ಲಂದೂರು ರಸ್ತೆಯಲ್ಲಿ ನಡೆದಿದೆ.
ಬಾಳೆಹೊನ್ನೂರು ಮೂಲದ ಯುವಕ ಹರೀಶ್ ಹುಡುಗಿಯೊಬ್ಬಳನ್ನು ನೋಡಲು ಬುರ್ಖಾ ಧರಿಸಿ ಬೆರಳಿಗೆ ನೈಲ್ ಪಾಲಿಶ್ ಹಾಕಿ ಯುವತಿಯಂತೆ ಶೃಂಗಾರ ಮಾಡಿಕೊಂಡು ಬಂದಿದ್ದ. ಚಿಕ್ಕಮಗಳೂರು ನಗರದಲ್ಲಿ ಬುರ್ಖಾ ತೊಟ್ಟು ಓಡಾಡುತ್ತಿದ್ದ ಯುವಕನ ಕೈ, ಬೆರಳು ಕಾಲು ನೋಡಿ ಸ್ಥಳೀಯರು ಅನುಮಾನಗೊಂಡಿದ್ದಾರೆ. ಆತನನ್ನು ಹಿಡಿದು ಎರಡೇಟು ಕೊಟ್ಟಾಗ ನಿಜಾಂಶ ಗೊತ್ತಾಗಿದೆ. ಹುಡುಗಿಗಾಗಿ ಬುರ್ಖಾ ಧರಿಸಿ ಬಂದಿದ್ದ ಅನ್ನೋದು ಗೊತ್ತಾಗಿದೆ.
ಇನ್ನು ಬುರ್ಖಾ ಒಳಗೆ ಯುವಕ ಚಾಕು ಇಟ್ಟುಕೊಂಡಿದ್ದ ಎನ್ನಲಾಗಿದೆ. ಹುಡುಗಿಗಾಗಿ ಬಾಳೆಹೊನ್ನೂರಿನಲ್ಲಿ ಬುರ್ಖಾ ಖರೀದಿ ಮಾಡಿ ಅದನ್ನು ಹರೀಶ್ ಧರಿಸಿಕೊಂಡು ಬಂದಿದ್ದ ಎನ್ನಲಾಗಿದೆ. ಸದ್ಯ ಆತನನ್ನು ವಶಕ್ಕೆ ಪಡೆದಿರುವ ಚಿಕ್ಕಮಗಳೂರು ಬಸವನಹಳ್ಳಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
- Advertisement -


