Friday, June 27, 2025
Homeಕರಾವಳಿಮೂಡುಬಿದಿರೆ: 2024-25ರ ಸಾಲಿನ ಕಂಬಳ ವೇಳಾಪಟ್ಟಿ ಪ್ರಕಟ; ಈ ಬಾರಿ ಶಿವಮೊಗ್ಗದಲ್ಲೂ ನಡೆಯಲಿದೆ ಕಂಬಳ

ಮೂಡುಬಿದಿರೆ: 2024-25ರ ಸಾಲಿನ ಕಂಬಳ ವೇಳಾಪಟ್ಟಿ ಪ್ರಕಟ; ಈ ಬಾರಿ ಶಿವಮೊಗ್ಗದಲ್ಲೂ ನಡೆಯಲಿದೆ ಕಂಬಳ

spot_img
- Advertisement -
- Advertisement -

ಮೂಡುಬಿದಿರೆ: 2024-25ರ ಸಾಲಿನ ಕಂಬಳ ವೇಳಾಪಟ್ಟಿ ಪ್ರಕಟವಾಗಿದೆ. ಈ ಬಾರಿ ಶಿವಮೊಗ್ಗದಲ್ಲೂ ಕಂಬಳ ನಡೆಯಲಿರೋದು ವಿಶೇಷವಾಗಿದೆ.

ಮೂಡುಬಿದಿರೆಯಲ್ಲಿ ಆಗಸ್ಟ್ 10 ರಂದು ನಡೆದ ಜಿಲ್ಲಾ ಕಂಬಳ ಸಮಿತಿಯ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ. 2024-25ನೇ ಸಾಲಿನ  ಕಂಬಳ ಸೀಸನ್‌ ಅಕ್ಟೋಬರ್‌ 26ರಂದು ಆರಂಭವಾಗಿ 2025ರ ಏಪ್ರಿಲ್‌ 19ರವರೆಗೆ ನಡೆಯಲಿದೆ.

ಕಂಬಳವನ್ನು ಕಳೆದ ವರ್ಷ ಬೆಂಗಳೂರಿನಲ್ಲಿ ನಡೆಸಲಾಗಿತ್ತು. ಜತೆಗೆ ಇತರ ಕಡೆಗಳಲ್ಲೂ ಕಂಬಳ ಆಯೋಜನೆಗೆ ಒಲವು ವ್ಯಕ್ತವಾಗಿರುವ ಹಿನ್ನೆಲೆ ಶಿವಮೊಗ್ಗದಲ್ಲಿ ಈ ಬಾರಿ ಕಂಬಳ ನಡೆಸಲು ಅಲ್ಲಿನ ಉದ್ಯಮಿಗಳು, ಕರಾವಳಿ ಭಾಗದ ಪ್ರಮುಖರು ಹಾಗೂ ಇತರರು ಆಸಕ್ತಿ ತೋರಿದ್ದಾರೆ.ಅದರಂತೆ ಈ ಬಾರಿ ಶಿವಮೊಗ್ಗದಲ್ಲಿ ಕಂಬಳ ನಡೆಯಲಿದೆ.

ಇನ್ನ ದೂರದ ಊರಿನಲ್ಲಿ ನಡೆಯುವ ಕಂಬಳಕ್ಕೆ ತೆರಳುವ ಕೋಣಗಳಿಗೆ ಪ್ರಯಾಣದ ಕಾರಣದಿಂದ ವಿಶ್ರಾಂತಿಯ ಅಗತ್ಯವಿರುತ್ತದೆ. ಹಾಗಾಗಿ ಬೆಂಗಳೂರು ಕಂಬಳದ ಬಳಿಕ ಒಂದು ವಾರ ಹೆಚ್ಚುವರಿ ವಿಶ್ರಾಂತಿ ಸಮಯ ನೀಡಲಾಗಿದೆ. ಹಾಗೆಯೇ ಶಿವಮೊಗ್ಗ ಕಂಬಳವನ್ನು ಸೀಸನ್ ನ ಕೊನೆಯಲ್ಲಿ ಮಾಡಲಾಗುತ್ತಿದೆ.ಅಕ್ಟೋಬರ್‌ 26ರಂದು ಬೆಂಗಳೂರು ಕಂಬಳ ನಡೆಯಲಿದೆ. ಅಂತಿಮ ಕಂಬಳವು ಶಿವಮೊಗ್ಗದಲ್ಲಿ ಅಂದರೆ ಏಪ್ರಿಲ್‌ 19ರಂದು ನಡೆಯಲಿದೆ.

2024-25ರ ಕಂಬಳ ವೇಳಾಪಟ್ಟಿ ಇಂತಿದೆ.

26-10-2024: ಬೆಂಗಳೂರು

03-11-2024: ವಿಶ್ರಾಂತಿ (ದೀಪಾವಳಿ)

09-11-2024: ಪಿಲಿಕುಳ

16-11-2024: ಕಕ್ಯಪದವು

23-11-2024: ಕೊಡಂಗೆ

30-11-2024: ಬಳ್ಕುಂಜೆ

07-12-2024: ಹೊಕ್ಕಾಡಿಗೋಳಿ

14-12-2024: ಬಾರಾಡಿ ಬೀಡು

21-12-2024: ಮೂಲ್ಕಿ

28-12-2024: ಮಂಗಳೂರು

04-01-2025: ಅಡ್ವೆ-ನಂದಿಕೂರು

11-01-2025: ನರಿಂಗಾನ

18-01-2025: ಮೂಡುಬಿದಿರೆ

25-01-2025: ಐಕಳ ಬಾವ

01-02-2025: ಪುತ್ತೂರು

08-02-2025: ಜೆಪ್ಪು

15-02-2025: ವಾಮಂಜೂರು

22-02-2025: ಕಟಪಾಡಿ

01-03-2025: ಬಂಗಾಡಿ

08-03-2025: ಬಂಟ್ವಾಳ

15-03-2025: ಮಿಯ್ಯಾರು

22-03-2025: ಉಪ್ಪಿನಂಗಡಿ

29-03-2025: ವೇಣೂರು

05-04-2025: ಪಣಪಿಲ

12-04-2025: ಗುರುಪುರ

19-04-2025: ಶಿವಮೊಗ್ಗ

- Advertisement -
spot_img

Latest News

error: Content is protected !!