Thursday, June 25, 2026
Homeಕರಾವಳಿಮಂಗಳೂರುಮಂಗಳೂರಿನಲ್ಲಿ ಮುಸ್ಲಿಂ ಯುವಕನೊಂದಿಗೆ ಹಿಂದೂ ಯುವತಿ ನಾಪತ್ತೆಯಾದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಅದ್ಧೂರಿಯಾಗಿ ಅಶ್ಫಕ್ ನನ್ನು...

ಮಂಗಳೂರಿನಲ್ಲಿ ಮುಸ್ಲಿಂ ಯುವಕನೊಂದಿಗೆ ಹಿಂದೂ ಯುವತಿ ನಾಪತ್ತೆಯಾದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಅದ್ಧೂರಿಯಾಗಿ ಅಶ್ಫಕ್ ನನ್ನು ವರಿಸಿದ ವಿಸ್ಮಯ

- Advertisement -
- Advertisement -

ಮಂಗಳೂರಿನಲ್ಲಿ ಮುಸ್ಲಿಂ ಯುವಕನೊಂದಿಗೆ ಹಿಂದೂ ಯುವತಿ ನಾಪತ್ತೆಯಾದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಅದ್ಧೂರಿಯಾಗಿ ಅಶ್ಫಕ್ ನನ್ನು ವರಿಸಿದ ವಿಸ್ಮಯ

ಮಂಗಳೂರಿನಲ್ಲಿ ಮುಸ್ಲಿಂ ಯುವಕನೊಂದಿಗೆ ಹಿಂದೂ ಯುವತಿ ನಾಪತ್ತೆಯಾದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಹಿಂದೂ ಯುವತಿ ವಿಸ್ಮಯ ಕ್ರಿಮಿನಲ್ ಹಿನ್ನೆಲೆ ಇರುವ ಯುವಕ ಅಶ್ಫಕ್ ನನ್ನು ವಿವಾಹವಾಗಿದ್ದಾಳೆ.ಈ ಮೂಲಕ ಹಿಂದೂ ಸಂಘಟನೆಗಳ ಹೋರಾಟಕ್ಕೆ ಫಲ ಸಿಗದಂತಾಗಿದೆ.

ಕಾಸರಗೋಡು ವಿದ್ಯಾನಗರದ ನಿವಾಸಿಯಾದ ವಿಸ್ಮಯ ಅಶ್ಫಕ್ ಎಂಬ ಮುಸ್ಲಿಂ ಯುವಕನನ್ನು ಪ್ರೀತಿಸುತ್ತಿದ್ದಳು. ಆತನಿಗೆ ಮೊದಲೇ ವಿವಾಹವಾಗಿತ್ತು. ಈತನ ವಿರುದ್ಧ ಕಾಸರಗೋಡಿನ ವಿದ್ಯಾನಗರ ಪೊಲೀಸ್​ ಠಾಣೆಯಲ್ಲಿ ಎಂಟು ಪ್ರಕರಣಗಳು ದಾಖಲಾಗಿವೆ. ಪ್ರೀತಿ ವಿಚಾರ ಗೊತ್ತಾಗುತ್ತಿದ್ದಂತೆ ವಿಸ್ಮಯಳ  ತಂದೆ ವಿನೋದ್​ ಅವರು ಆಕೆಯನ್ನು ಮಂಗಳೂರಿನ ಉಳ್ಳಾಲದ ಅತ್ತೆ ಮನೆಯಲ್ಲಿ ಇರಿಸಿ ಬಿಸಿಎ ಓದಿಸುತ್ತಿದ್ದರು. ಇಲ್ಲಿಯೂ ಆಕೆಯನ್ನು ಬಿಡದ ಆಶ್ಫಕ್​​ ಕಳೆದ ಜೂನ್​ 6 ರಂದು ಉಳ್ಳಾಲದಿಂದ ವಿಸ್ಮಯ ಕರೆದುಕೊಂಡು ಹೋಗಿದ್ದನು. ಬಳಿಕ ವಿದ್ಯಾನಗರ ಠಾಣೆ ಪೊಲೀಸರು ಪತ್ತೆ ಹಚ್ಚಿ ವಿಸ್ಮಯಳನ್ನ ಮನೆಯವರ ಜೊತೆ ಕಳುಹಿಸಿದ್ದರು. ಮತ್ತೆ ಜೂ‌ನ್ 30ರಂದು ಆಶ್ಫಕ್​​ ಉಳ್ಳಾಲದಿಂದ ವಿಸ್ಮಯಳನ್ನು ಅಪಹರಿಸಿ ಕೊಚ್ಚಿಗೆ ಕರೆದುಕೊಂಡು ಹೋಗಿದ್ದನು.

ಈ ಬಗ್ಗೆ ವಿಸ್ಮಯ ತಂದೆ ವಿನೋದ್​ ಅವರು ಉಳ್ಳಾಲ ಪೊಲೀಸ್​ ಠಾಣೆಯಲ್ಲಿ ಅಪಹರಣ ದೂರು ದಾಖಲಿಸಿದ್ದರು. ಬಳಿಕ ವಿದ್ಯಾನಗರ ಠಾಣೆ ಪೊಲೀಸರು ಇಬ್ಬರನ್ನು ಪತ್ತೆ ಹಚ್ಚಿ, ಪೋಷಕರಿಗೆ ಒಪ್ಪಿಸಿದರು. ಬಳಿಕ ವಿನೋದ್​ ಮಂಗಳೂರಿನ ವಿಹೆಚ್​ಪಿ ನಾಯಕರನ್ನು ಭೇಟಿಯಾಗಿ, ಕ್ರಿಮಿನಲ್ ಹಿನ್ನೆಲೆ ಹೊಂದಿರುವ ಅಶ್ಪಕ್ ಎರಡು ತಿಂಗಳ ಪರಿಚಯದಲ್ಲೇ ವಿಸ್ಮಯಳನ್ನು ಮೈಂಡ್ ವಾಶ್ ಮಾಡಿದ್ದಾನೆ. ಕೇರಳದಲ್ಲಿ ವಿಸ್ಮಯಳನ್ನು ಮತಾಂತರಿಸಲು ಯತ್ನಿಸಿದ್ದಾನೆ. ನನ್ನ ಮಗಳನ್ನ ಉಳಿಸಿಕೊಡಿ ಎಂದು ಕಣ್ಣೀರು ಹಾಕಿದ್ದರು.

ನಂತರ ವಿಹೆಚ್​ಪಿ ನಾಯಕರು ವಿಸ್ಮಯಳನ್ನು ಮಂಗಳೂರಿನ ಕೌನ್ಸಿಲಿಂಗ್ ಕೇಂದ್ರದಲ್ಲಿರಿಸಿದ್ದರು. ಕೌನ್ಸಿಲಿಂಗ್ ಕೇಂದ್ರದಲ್ಲಿ ವಿಸ್ಮಯ, ಅಶ್ಫಕ್ ಜೊತೆಗೆ ತೆರಳುವುದಾಗಿ ಹೇಳುತ್ತಿದ್ದಳು. ಕಾನೂನು ಹೋರಾಟದ ಮೂಲಕ ಮಗಳನ್ನು ವಾಪಾಸ್ ಕರೆದುಕೊಂಡು ಬರುವುದಾಗಿ ವಿಹೆಚ್​ಪಿ ಮುಖಂಡರು ಭರವಸೆ ನೀಡಿದ್ದರು. ಇದರ ಮಧ್ಯೆ ಅಶ್ಫಕ್ ಕೇರಳ ಹೈಕೋರ್ಟ್​​ಗೆ ಹೆಬಿಯಾಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದನು. ಈ ಹಿನ್ನೆಲೆಯಲ್ಲಿ ನ್ಯಾಯಾಲಯದಲ್ಲಿ ವಾದ-ವಿವಾದ ನಡೆದಿದೆ. ಕೊನೆಗೆ ನ್ಯಾಯಾಲಯದ ಆದೇಶ ಅಶ್ಫಕ್​ ಪರವಾಗಿ ಬಂದಿದೆ. ಇದೀಗ, ಆಶ್ಫಕ್​ ವಿಸ್ಮಯಳನ್ನು ಇಸ್ಲಾಂಗೆ ಮತಾಂತರಿಸಿ, ವಿವಾಹವಾಗಿದ್ದಾನೆ. ತಂದೆ-ತಾಯಿ, ಹಿಂದೂ ಸಂಘಟನೆಗಳ ಹೋರಾಟದ ಬಳಿಕವೂ ವಿಸ್ಮಯ, ಆಶ್ಫಕನನ್ನು ವರಸಿದ್ದಾಳೆ. ಆಶ್ಫಕ್​ಗೆ ಇದು ಎರಡನೇ ಮದುವೆಯಾಗಿದೆ.

ವಿಸ್ಮಯ ತಂದೆ ಬಳಿ ಕ್ಷಮೆ ಕೇಳಿದ ಶರಣ್ ಪಂಪವೆಲ್

‘ಕ್ಷಮಿಸಿ ವಿನೋದ್ ರವರೇ, ನಿಮ್ಮ ಮಗಳನ್ನು ಉಳಿಸಲು ನಮ್ಮಿಂದ ಸಾಧ್ಯವಾಗಿಲ್ಲ’. ಕೇರಳ ಹೈಕೋರ್ಟ್ ಆದೇಶದಂತೆ ವಿಸ್ಮಯಳನ್ನು ನಟೋರಿಯಸ್ ಕ್ರಿಮಿನಲ್ ಮೊಹಮ್ಮದ್ ಆಶ್ಫಕ್​​ ಮದುವೆಯಾಗಿದ್ದಾನೆ ಎಂದು ಫೇಸ್​ಬುಕ್​ನಲ್ಲಿ ಫೋಸ್ಟ್​ ಹಾಕಿದ್ದಾರೆ.

- Advertisement -

Latest News

error: Content is protected !!