Thursday, June 4, 2026
Homeತಾಜಾ ಸುದ್ದಿಮುಖ್ಯಮಂತ್ರಿಗೂ ಕೊರೊನಾ ಭೀತಿ: 5 ದಿನಗಳ ಕಾಲ ಹೋಂ ಕ್ವಾರಂಟೈನ್ ನಲ್ಲಿ ಸಿಎಂ ಬಿ.ಎಸ್.ವೈ

ಮುಖ್ಯಮಂತ್ರಿಗೂ ಕೊರೊನಾ ಭೀತಿ: 5 ದಿನಗಳ ಕಾಲ ಹೋಂ ಕ್ವಾರಂಟೈನ್ ನಲ್ಲಿ ಸಿಎಂ ಬಿ.ಎಸ್.ವೈ

- Advertisement -
- Advertisement -

ಬೆಂಗಳೂರು:ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಏರಿಕೆಯಾಗುತ್ತಿರುವುದು ಒಂದೆಡೆಯಾದರೆ ಇತ್ತ ಮುಖ್ಯಮಂತ್ರಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಮನೆಯಲ್ಲೇ ಸುಮಾರು 10 ಜನರಿಗೆ ​ಕೊರೊನಾ ಸೋಂಕು ದೃಢವಾಗಿದ್ದು ಕಾವೇರಿ, ಕೃಷ್ಣಾ ಹಾಗೂ ಧವಳಗಿರಿ ನಿವಾಸದಲ್ಲಿ ಕಾರ್ಯನಿರ್ವಹಿಸುವವರಿಗೆ ಸೋಂಕು ಪತ್ತೆಯಾಗಿದೆ ಎನ್ನಲಾಗಿದೆ.

ಸ್ವತಃ ಸಿಎಂ ಕಾರು ಚಾಲಕನಿಗೂ ಸೋಂಕು ದೃಢವಾಗಿದ್ದು ಸಿಎಂ ಕೊರೊನಾ ಆತಂಕದಲ್ಲಿದ್ದಾರೆ ಎನ್ನುವ ಮಾಹಿತಿ ಇದೆ. ಹೀಗಾಗಿ ಸಿಎಂ ಬಿಎಸ್​ವೈ ಇಂದು ವಿಧಾನಸೌಧ ಭೇಟಿಯನ್ನ ರದ್ದುಪಡಿಸಿದ್ದು ಹಲವು ಕಾರ್ಯಕ್ರಮಗಳಿಗೆ ಗೈರಾಗಲಿದ್ದಾರೆ. ಹಾಗೆಯೆ ಮುಂದಿನ ದಿನಗಳ ವರೆಗೆ ಸಿಎಂ ಯಡಿಯೂರಪ್ಪನವರು ಮನೆಯಲ್ಲೇ ಸ್ವಯಂ ಪ್ರೇರಿತ ಕ್ವಾರಂಟೈನ್ ಆಗಲು ನಿರ್ಧರಿಸದ್ದಾರೆ.

ಮುಂದಿನ ಬುಧವಾರದವರೆಗೆ ಸಾರ್ವಜನಿಕರ ಭೇಟಿಗೆ ಅವಕಾಶವಿರುವುದಿಲ್ಲ ಎನ್ನಲಾಗಿದೆ.
ಸರ್ಕಾರದ ಹಲವು ಕಾರ್ಯಗಳ ಬಗ್ಗೆ ಸಿಎಂ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತುಕತೆ ನಡೆಸಲಿದ್ದಾರೆ.

- Advertisement -

Latest News

error: Content is protected !!