Wednesday, June 24, 2026
Homeಕರಾವಳಿಮನೆಯ ಹಿಂಬದಿಗೆ ಆಕಸ್ಮಿಕವಾಗಿ ತಗುಲಿದ ಬೆಂಕಿ; ಸಂಪೂರ್ಣವಾಗಿ ಹಾನಿಗೊಂಡ ಮನೆ

ಮನೆಯ ಹಿಂಬದಿಗೆ ಆಕಸ್ಮಿಕವಾಗಿ ತಗುಲಿದ ಬೆಂಕಿ; ಸಂಪೂರ್ಣವಾಗಿ ಹಾನಿಗೊಂಡ ಮನೆ

- Advertisement -
- Advertisement -

ಬೆಳ್ತಂಗಡಿ: ನೆರಿಯ ಗ್ರಾಮದ ಕುವೆತ್ತಿಲ್‌ ಅನಿಲ್‌ ಅವರ ಮನೆಯ ಹಿಂಭಾಗಕ್ಕೆ ಆಕಸ್ಮಿಕವಾಗಿ ಬೆಂಕಿ ತಗಲಿದ್ದು, ಬೆಂಕಿ ಮನೆಗೆ ಆವರಿಸಿ ಸಂಪೂರ್ಣವಾಗಿ ಮನೆಗೆ ಹಾನಿಯಾಗಿರುವ ಘಟನೆ ರವಿವಾರ ಮಧ್ಯಾಹ್ನ ನಡೆದಿದೆ.

ಹಾನಿಗೊಂಡ ಮನೆಯಲ್ಲಿ ನಾಲ್ವರು ವಾಸವಿದ್ದು, ಎಲ್ಲರೂ ಕ್ಷೇತ್ರವೊಂದರ ಭೇಟಿಗೆ ತೆರಳಿದ್ದರು. ಘಟನೆ ನಡೆದಾಗ ಮನೆಯಲ್ಲಿ ಯಾರು ಇರಲಿಲ್ಲ. ಬೆಂಕಿಯು ಮನೆಯ ಹಿಂಬದಿಯ ನೆಟ್‌ ಒಂದಕ್ಕೆ ತಗಲಿ ಅನಂತರ ಮನೆಯಲ್ಲಿದ್ದ ಪುಸ್ತಕ, ರಬ್ಬರ್‌ಗೆ ಹೊತ್ತಿದ್ದು, ಎಲ್ಲವೂ ಭಸ್ಮವಾಗಿದೆ.

ಸ್ಥಳೀಯಯರಾದ ಆನಂದ್‌, ಆಶೋಕ್‌, ಸತೀಶ್‌, ಧರ್ಣಪ್ಪ ಗೌಡ, ಯಶೋದಾ, ಗೀತಾ, ರಮಾನಂದ ಮತ್ತಿತರರು ಬೆಂಕಿಯನ್ನು ಹತೋಟಿಗೆ ತರಲು ಪ್ರಯತ್ನಿಸಿದರು. ಆದರೆ ಆಗಲೇ ಬೆಂಕಿಯು ಮನೆಯ ಸುತ್ತಲೂ ಆವರಿಸಿದ ಕಾರಣ ಮನೆಗೆ ಸಂಪೂರ್ಣ ಹಾನಿಯಾಗಿದೆ ಎಂದು ತಿಳಿದುಬಂದಿದೆ.

- Advertisement -

Latest News

error: Content is protected !!