- Advertisement -
![]()
- Advertisement -
ಮೂಡಬಿದಿರೆ: ಗ್ಯಾಸ್ ಗೀಸರ್ ನಿಂದ ವಿಷಾನಿಲ ಸೋರಿಕೆಯಾಗಿ ಸ್ನಾನಕ್ಕೆ ತೆರಳಿದ್ದ ಯುವಕ ಮೃತಪಟ್ಟಿರುವ ಘಟನೆ ಮೂಡಬಿದಿರೆಯಲ್ಲಿ ಸಂಭವಿಸಿದೆ.ಮೂಡಬಿದಿರೆ ತಾಲೂಕಿನ ಕೋಟೆಬಾಗಿಲು ಎಂಬಲ್ಲಿ ಘಟನೆ ನಡೆದಿದ್ದು, ಶಾರೀಕ್ (18) ಎಂಬ ಯುವಕ ಮೃತಪಟ್ಟಿದ್ದಾನೆ.
ಕೋಟೆಬಾಗಿಲಿನ ಫ್ಲ್ಯಾಟ್ ಒಂದರಲ್ಲಿ ಕುಟುಂಬದೊಂದಿಗೆ ಶಾರೀಕ್ ವಾಸವಿದ್ದು, ಸ್ನಾನಕ್ಕೆ ಹೋಗಿ ತುಂಬಾ ಹೊತ್ತಾದರೂ ಹೊರಬರದ ಹಿನ್ನೆಲೆಯಲ್ಲಿ ಮನೆಯವರು ಬಾಗಿಲು ಒಡೆದು ಪರಿಶೀಲಿಸಿದಾಗ ಮೃತಪಟ್ಟಿರುವುದು ತಿಳಿದುಬಂದಿದೆ.
ಗ್ಯಾಸ್ ಗೀಸರ್ ನಿಂದ ಬಿಡುಗಡೆಯಾಗಿದ್ದ ವಿಷಾನಿಲ ಬಾತ್ ರೂಂನಲ್ಲಿ ತುಂಬಿದ್ದರಿಂದ ಸ್ನಾನಕ್ಕೆ ತೆರಳಿದ್ದ ಶಾರೀಕ್ ಮೃತಪಟ್ಟಿದ್ದಾನೆ.
- Advertisement -


