Thursday, June 4, 2026
Homeಕರಾವಳಿಬೆಳ್ತಂಗಡಿ; ಅಂಗಡಿಯ ಹೊರಗೆ ಸಿಟೌಟ್ ನಲ್ಲಿ ಕುಳಿತಿದ್ದ ಯುವಕನಿಗೆ ತಂಡದಿಂದ ಹಲ್ಲೆ

ಬೆಳ್ತಂಗಡಿ; ಅಂಗಡಿಯ ಹೊರಗೆ ಸಿಟೌಟ್ ನಲ್ಲಿ ಕುಳಿತಿದ್ದ ಯುವಕನಿಗೆ ತಂಡದಿಂದ ಹಲ್ಲೆ

- Advertisement -
- Advertisement -

ಬೆಳ್ತಂಗಡಿ; ಅಂಗಡಿಯ ಹೊರಗೆ ಸಿಟೌಟ್ ನಲ್ಲಿ ಕುಳಿತಿದ್ದ ಯುವಕನಿಗೆ ತಂಡವೊಂದು ಹಲ್ಲೆ ಮಾಡಿರುವ ಘಟನೆ ಕಣಿಯೂರು ಕಸಬಾ ಎಂಬಲ್ಲಿ ನಡೆದಿದೆ. ಪ್ರವೀಣ್ (26) ಹಲ್ಲೆಗೊಳಗಾದ ಯುವಕ.

28-07-2024 ರಂದು ಮಧ್ಯಾಹ್ನ ಪ್ರವೀಣ್ ಅವರು ಕಣಿಯೂರು ಕಸಬಾ ಎಂಬಲ್ಲಿರುವ ಅಂಗಡಿಯ ಹೊರಗೆ ಸಿಟೌಟ್ನಲ್ಲಿ ಕುಳಿತಿದ್ದಾಗ, ಅಲ್ಲಿಗೆ ಮಾರುತಿ ಶಿಫ್ಟ್ ಕಾರಿನಲ್ಲಿ ಬಂದ ಪ್ರವೀಣ್ ಅವರ ಪರಿಚಯಸ್ಥರಾದ ರಾಧಾಕೃಷ್ಣ, ಪ್ರಜ್ವಲ್.ಕೆ.ವಿ.ಗೌಡ,  ಕಿರಣ್ ಶಿಶಿಲ ಹಾಗೂ ಪರಿಚಯವಿಲ್ಲದ 5 ಜನರು ಬಂದಿದ್ದಾರೆ. ಬಂದವರಲ್ಲಿ  ಪ್ರಜ್ವಲ್.ಕೆ.ವಿ.ಗೌಡ ಎಂಬಾತನ ಅವಾಚ್ಯ ಶಬ್ದಗಳಿಂದ ಬೈದಿದ್ದು, ಮತ್ತೋರ್ವ ಆರೋಪಿ ಕಿರಣ್ ಶಿಶಿಲ ಎಂಬಾತ ಆತನ ಕೈಯಲ್ಲಿದ್ದ ಕಬ್ಬಿಣದ ಕ್ರಾಂಕೇಟ್ ರಾಡ್ನಿಂದ ಪ್ರವೀಣ್ ಅವರಿಗೆ ಹಲ್ಲೆ ಮಾಡಿದ್ದಾನೆ. ಆತನೊಂದಿಗೆ ಇತರ ಆರೋಪಿಗಳಾದ ಪ್ರಜ್ವಲ್.ಕೆ.ವಿ.ಗೌಡ ,ರಾಧಕೃಷ್ಣ ಮತ್ತು ಅವರ ಜೊತೆಯಲ್ಲಿ ಬಂದಿದ್ದ ಇನ್ನಿಬ್ಬರು ಕೈಗಳಿಂದ ಹಲ್ಲೆ ಮಾಡಿದ್ದಾರೆ. ಬಳಿಕ ದೂರುದಾರರಿಗೆ ಜೀವ ದರಿಕೆಯೊಡ್ಡಿ ತೆರಳಿದ್ದಾರೆ. ಈ ಬಗ್ಗೆ ಪ್ರವೀಣ್ ಅವರು ನೀಡಿದ ದೂರಿನ ಮೇರೆಗೆ ಉಪ್ಪಿನಂಗಡಿ ಠಾಣೆಯಲ್ಲಿ  ಅ.ಕ್ರ: 88/2024 ಕಲಂ: 189(2),191(2),191(3),352,115(2),118(1),329(4) 351(2)    ಜೊತೆಗೆ 190 BNS 2023 ರಂತೆ ಪ್ರಕರಣ ದಾಖಲಾಗಿರುತ್ತದೆ.

- Advertisement -

Latest News

error: Content is protected !!