Sunday, June 7, 2026
Homeತಾಜಾ ಸುದ್ದಿಎಡಕುಮೇರಿ ಬಳಿ ರೈಲ್ವೇ ಹಳಿಯ ಮಣ್ಣು ಕುಸಿತ; ಮಂಗಳೂರು ಬೆಂಗಳೂರು ಮಾರ್ಗದ 8 ರೈಲು ಸಂಚಾರ...

ಎಡಕುಮೇರಿ ಬಳಿ ರೈಲ್ವೇ ಹಳಿಯ ಮಣ್ಣು ಕುಸಿತ; ಮಂಗಳೂರು ಬೆಂಗಳೂರು ಮಾರ್ಗದ 8 ರೈಲು ಸಂಚಾರ ರದ್ದು

- Advertisement -
- Advertisement -

ಹಾಸನ: ಮಳೆಯಿಂದಾಗಿ ರೈಲ್ವೇ ಹಳಿಯ ಮೇಲೆ ಮಣ್ಣು ಕುಸಿತವಾಗಿ ಮಂಗಳೂರು ಮತ್ತು ಬೆಂಗಳೂರು ಮಾರ್ಗದ ಎಂಟು ರೈಲುಗಳ ಸಂಚಾರ ರದ್ದುಗೊಂಡಿದೆ.

ಸಕಲೇಶಪುರ ತಾಲ್ಲೂಕಿನ ಕಡಗರವಳ್ಳಿ – ಯಡಕುಮೇರಿ ಮಧ್ಯೆ ರೈಲ್ವೇ ಹಳಿಯ ಮೇಲೆ ಮಣ್ಣು ಕುಸಿದಿದ್ದು, ಸ್ಥಳಕ್ಕೆ ರೈಲ್ವೇ ಇಲಾಖೆಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ರೈಲ್ವೇ ಅಧಿಕಾರಿಗಳು ಮಾರ್ಗ ಬದಲಾವಣೆ ಮಾಡಿದ್ದು, ಟಿಕೇಟ್ ಪಡೆದು ಬಂದಿದ್ದ ಪ್ರಯಾಣಿಕರಿಗೆ ವಿವಿಧ ರೈಲ್ವೇ ನಿಲ್ದಾಣಗಳಲ್ಲಿ ಊಟ, ನೀರು ಹಾಗೂ ಬಸ್ ಪ್ರಯಾಣದ ವ್ಯವಸ್ಥೆಯನ್ನು ರೈಲ್ವೇ ಇಲಾಖೆ ಕಲ್ಪಿಸಿದೆ.ನಿರಂತರ ಮಳೆ ಸುರಿದ ಪರಿಣಾಮ ರೈಲ್ವೇ ಹಳಿಯ ಮೇಲೆ ಮಣ್ಣು ಕುಸಿತವಾಗಿತ್ತು.

- Advertisement -

Latest News

error: Content is protected !!