Sunday, June 7, 2026
Homeತಾಜಾ ಸುದ್ದಿಡಿಸಿಎಂ ಡಿ ಕೆ ಶಿವಕುಮಾರ್ ಭೇಟಿಯಾದ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಭೇಟಿಗೂ ವಿಜಯಲಕ್ಷ್ಮೀ ಮನವಿ

ಡಿಸಿಎಂ ಡಿ ಕೆ ಶಿವಕುಮಾರ್ ಭೇಟಿಯಾದ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಭೇಟಿಗೂ ವಿಜಯಲಕ್ಷ್ಮೀ ಮನವಿ

- Advertisement -
- Advertisement -

ಬೆಂಗಳೂರು : ನಿನ್ನೆ ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮೀ ದರ್ಶನ್ ಹಾಗೂ ಸಹೋದರ ದಿನಕರ್ ತೂಗುದೀಪ ಅವರು ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರನ್ನು ಭೇಟಿಯಾಗಿದ್ದರು. ಭೇಟಿ ಬಳಿಕ ಮಾತನಾಡಿದ ಡಿಸಿಎಂ ಡಿ ಕೆ ಶಿವಕುಮಾರ್ ಅವರು ವಿಜಯಲಕ್ಷ್ಮೀ ದರ್ಶನ್ ಹಾಗೂ ಸಹೋದರ ದಿನಕರ್ ಅವರು ದರ್ಶನ್ ಪುತ್ರ ವಿನೀಶ್ ನನ್ನು ನಮ್ಮ ಸ್ಕೂಲ್ ಗೆ ಸೇರಿಸುವ ಬಗ್ಗೆ ಮಾತನಾಡೋದಕ್ಕೆ ಬಂದಿದ್ದರು ಎಂದು ಹೇಳಿದ್ದರು. ಅಲ್ಲದೇ ಇದೇ ವಿಚಾರಕ್ಕೆ ವಿಜಿ ಡಿಸಿಎಂ ಮುಂದೆ ಕಣ್ಣೀರು ಹಾಕಿದ್ದರು ಅಂತಾ ಕೂಡ ಹೇಳಲಾಗಿತ್ತು.

ಅಲ್ಲದೇ ನಟ ದರ್ಶನ್‌  ಅವರ ಬೇಲ್‌ ಹಾಗೂ ಮನೆ ಊಟದ ವಿಚಾರವಾಗಿ ಮಾತನಾಡಿದ್ದು, ಈ ಬಗ್ಗೆ ಸಹಾಯ ಮಾಡುವಂತೆ ಕೇಳಿ ಕೊಂಡಿದ್ದಾರೆ ಎನ್ನಲಾಗಿತ್ತು. ಇದೀಗ ಇದರ ಬೆನ್ನಲ್ಲೇ ಇನ್ನು ಇಂದು ವಿಜಯಲಕ್ಷ್ಮೀ ಅವರು ಸಿಎಂ ಸಿದ್ದರಾಮಯ್ಯರನ್ನು ಭೇಟಿಯಾಗಿ ಈ ಬಗ್ಗೆ ಮಾತುಕತೆ ನಡೆಸಲಿದ್ದಾರೆ ಎಂದು ಹೇಳಲಾಗುತ್ತಿದೆ.

- Advertisement -

Latest News

error: Content is protected !!