Thursday, June 4, 2026
Homeಕರಾವಳಿಹಿರಿಯ ಚಿತ್ರ ನಿರ್ಮಾಪಕ, ಲೇಖಕ, ರಂಗಕರ್ಮಿ ಸದಾನಂದ ಸುವರ್ಣ ನಿಧನ

ಹಿರಿಯ ಚಿತ್ರ ನಿರ್ಮಾಪಕ, ಲೇಖಕ, ರಂಗಕರ್ಮಿ ಸದಾನಂದ ಸುವರ್ಣ ನಿಧನ

- Advertisement -
- Advertisement -

ಮಂಗಳೂರು: ಹಿರಿಯ ಚಿತ್ರ ನಿರ್ಮಾಪಕ, ಲೇಖಕ, ರಂಗಕರ್ಮಿ ಸದಾನಂದ ಸುವರ್ಣ ಅವರು 2024 ಜು.16 ಮಂಗಳವಾರದಂದು ವಯೋಸಹಜ ಅನಾರೋಗ್ಯದಿಂದ ನಿಧನರಾದರು. ಅವರಿಗೆ 92 ವರ್ಷ ವಯಸ್ಸಾಗಿತ್ತು.

ಮೂಲ್ಕಿ ಮೂಲದ ಸದಾನಂದ ಸುವರ್ಣರು ಕನ್ನಡ ರಂಗಭೂಮಿಯಲ್ಲಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದು, ಧರ್ಮಚಕ್ರ, ಸುಳಿ, ಡೊಂಕುಬಾಲದ ನಾಯಕರು, ಕೋರ್ಟ್‌ ಮಾರ್ಷಲ್‌, ಉರುಳು ಮತ್ತಿತರ ಜನಪ್ರಿಯ ನಾಟಕ ರಚನೆ ಮಾಡಿದ್ದರು. 

ಅವರ ಗುಡ್ಡೆದ ಭೂತ ಧಾರವಾಹಿ ದೂರದರ್ಶನದಲ್ಲಿ ಜನಮೆಚ್ಚುಗೆ ಗಳಿಸಿದ್ದು, ಘಟಶ್ರಾದ್ಧ ಸಿನಿಮಾಕ್ಕೆ ಸ್ವರ್ಣಕಮಲ ಪ್ರಶಸ್ತಿಯೂ ಲಭಿಸಿತ್ತು.   

ನೂರಾರು ಕನ್ನಡ ಮತ್ತು ತುಳು ನಾಟಕಗಳನ್ನು ನಿರ್ದೇಶಿಸಿದ್ದ  ಸದಾನಂದ ಸುವರ್ಣರ ರಂಗಗರಡಿಯಿಂದ ಬಂದಿರುವ ಹಲವಾರು ಪ್ರತಿಭಾವಂತ ನಟ-ನಟಿಯರು ಇಂದು ಕಲಾಜಗತ್ತಿನಲ್ಲಿ ಬದುಕು ಕಟ್ಟಿಕೊಂಡಿದ್ದಾರೆ.

- Advertisement -

Latest News

error: Content is protected !!