Thursday, June 4, 2026
Homeಕರಾವಳಿಮಂಗಳೂರುಉಪ್ಪಿನಂಗಡಿ: ಬೈಕ್‌ ಹಾಗೂ ಪಿಕಪ್‌ ಮಧ್ಯೆ ಅಪಘಾತ; ಗಂಭೀರ ಗಾಯಗೊಂಡ ಯುವಕ ಸಾವು

ಉಪ್ಪಿನಂಗಡಿ: ಬೈಕ್‌ ಹಾಗೂ ಪಿಕಪ್‌ ಮಧ್ಯೆ ಅಪಘಾತ; ಗಂಭೀರ ಗಾಯಗೊಂಡ ಯುವಕ ಸಾವು

- Advertisement -
- Advertisement -

ಪ್ಪಿನಂಗಡಿ: ಬೈಕ್‌ ಹಾಗೂ ಪಿಕಪ್‌ ಮಧ್ಯೆ ಅಪಘಾತ ಸಂಭವಿಸಿ ಗಂಭೀರ ಗಾಯಗೊಂಡ ಯುವಕ ಸಾವನ್ನಪ್ಪಿರುವ ಘಟನೆ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ನೆಲ್ಯಾಡಿ ಸಮೀಪದ ಕೊಣಾಲು ಗ್ರಾಮದ ಕೊಲ್ಪೆಯಲ್ಲಿ ನಡೆದಿದೆ.

ಮಂಗಳೂರು ಕೋಡಿಕ್ಕಲ್‌ ನಿವಾಸಿ ಉಮೇಶ್‌ ಕೆ.ಅವರ ಪುತ್ರ ಪ್ರಣಮ್‌ ಕೋಟ್ಯಾನ್‌ (23) ಮೃತ ಬೈಕ್ ಸವಾರ.

ಪ್ರಣಮ್‌ ಕೋಟ್ಯಾನ್‌  ಮೆಡಿಕಲ್ ರೆಪ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು ಎನ್ನಲಾಗಿದೆ. ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!