ಹೈದರಾಬಾದ್: ಬಾಲಿವುಡ್ ನಟಿ ಊರ್ವಶಿ ರೌಟೇಲಾ ಅವರಿಗೆ ಶೂಟಿಂಗ್ ಸಂದರ್ಭದಲ್ಲಿ ಸಂಭವಿಸಿದ ಅವಘಡದಿಂದ ಗಂಭೀರ ಗಾಯಗಳಾಗಿರುವ ಘಟನೆ ನಡೆದಿರುವುದು ವರದಿಯಾಗಿದೆ.
ತನ್ನ ನಟನೆ ಹಾಗೂ ಮೋಹಕ ನೋಟದಿಂದ ಬಾಲಿವುಡ್ ಸೇರಿದಂತೆ, ಬಹುಭಾಷೆಯಲ್ಲಿ ಸದ್ದು ಮಾಡಿರುವ ನಟಿ ಊರ್ವಶಿ ರೌಟೇಲಾ ಹೈದರಾಬಾದ್ ನಲ್ಲಿ ಟಾಲಿವುಡ್ ನಟ ನಂದಮೂರಿ ಬಾಲಕೃಷ್ಣ ಅವರ ʼಎನ್‌ಬಿಕೆ 109ʼ(NBK 109) ಚಿತ್ರೀಕರಣದ ಸಂದರ್ಭದಲ್ಲಿ ಗಂಭೀರ ಸ್ವರೂಪದಲ್ಲಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಚಿತ್ರದ ಸಾಹಸ ದೃಶ್ಯದ ವೇಳೆ ಅವರ ಕಾಲಿಗೆ ಪೆಟ್ಟಾಗಿದ್ದು, ಅರ್ಧದಲ್ಲೇ ಶೂಟಿಂಗ್ ಬಿಟ್ಟು ಆಸ್ಪತ್ರೆಗೆ ದಾಖಲಾಗಿದ್ದಾರೆ. ಇನ್ನು ಸ್ವತಃ ಊರ್ವಶಿ ಸುದ್ದಿ ಪೋರ್ಟಲ್ ವೊಂದಕ್ಕೆ, ’ಶೂಟಿಂಗ್ ಸಂದರ್ಭದಲ್ಲಿ ಕಾಲಿಗೆ ಏಟಾಗಿದೆ. ಸದ್ಯ ನಾನು ತುಂಬಾ ನೋವಿನಲ್ಲಿದ್ದೇನೆ. ಎಲ್ಲಾ ರೀತಿಯ ಚಿಕಿತ್ಸೆಯನ್ನು ಪಡೆಯುತ್ತಿದ್ದೇನೆ,’ ಎಂದು ಹೇಳಿರುವುದಾಗಿ ವರದಿ ತಿಳಿಸಿದೆ.
ಬಾಬಿ ಕೊಲ್ಲಿ ನಿರ್ದೇಶನದ ʼಎನ್‌ಬಿಕೆ 109ʼ 2023ರ ನವೆಂಬರ್ ನಲ್ಲಿ ಸೆಟ್ಟೇರಿದೆ. ಈ ಸಿನಿಮಾದಲ್ಲಿ ಊರ್ವಶಿ ಕೂಡ ನಟಿಸಿದ್ದು, ಎಸ್. ಥಮನ್ ಸಂಗೀತ ಇರುವ ಈ ಚಿತ್ರದ ಟೈಟಲ್ ಹಾಗೂ ರಿಲೀಸ್ ಡೇಟ್ ಇನ್ನಷ್ಟೇ ಅನೌನ್ಸ್ ಆಗಬೇಕಿದೆ.