Friday, June 5, 2026
Homeತಾಜಾ ಸುದ್ದಿಧಾರಾಕಾರ ಮಳೆ ಪರಿಣಾಮ ರಸ್ತೆ ಮೇಲೆ ಮೊಸಳೆ ಓಡಾಟ; ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್‌

ಧಾರಾಕಾರ ಮಳೆ ಪರಿಣಾಮ ರಸ್ತೆ ಮೇಲೆ ಮೊಸಳೆ ಓಡಾಟ; ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್‌

- Advertisement -
- Advertisement -

ನವದೆಹಲಿ: ರಸ್ತೆಯಲ್ಲಿ ದೊಡ್ಡ ಗಾತ್ರದ ಮೊಸಳೆಯೊಂದು ಧಾರಾಕಾರ ಮಳೆಯ ಪರಿಣಾಮವಾಗಿ ಮಹಾರಾಷ್ಟ್ರದ ರತ್ನಗಿರಿಯ ಜಿಲ್ಲೆಯಲ್ಲಿ  ಹರಿದಾಡುತ್ತಿರುವುದನ್ನು ಕಂಡು ಜನರು ಅಚ್ಚರಿಗೊಳಗಾದ ಘಟನೆ ನಡೆದಿದೆ.

https://x.com/ParveenKaswan/status/1807639042931970237?

ರತ್ನಗಿರಿಯ ಚಿಪ್ಲುನ್‌ ನ ರಸ್ತೆಯಲ್ಲಿ ಮೊಸಳೆ ಇದ್ದಿರುವುದು ಜನರ ಗಮನಕ್ಕೆ ಬಂದಿದ್ದು, ಈ ವಿಡಿಯೋವನ್ನು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಸೆರೆಹಿಡಿಯಲಾಗಿದೆ. ಸಮೀಪದ ಶಿವ ನದಿಯಿಂದ ಮೊಸಳೆ ರಸ್ತೆಗೆ ಬಂದಿರುವುದಾಗಿ ವರದಿ ತಿಳಿಸಿದೆ.

ರತ್ನಗಿರಿ ಮುಗ್ಗೆರ್‌ ಮೊಸಳೆ ಪ್ರಭೇದಕ್ಕೆ ಹೆಸರುವಾಸಿಯಾಗಿದೆ. ಭಾರತದಲ್ಲಿರುವ ಮೂರು ಜಾತಿಯ ಮೊಸಳೆಗಳಲ್ಲಿ ಮುಗ್ಗೆರ್‌ ಕೂಡಾ ಒಂದಾಗಿದೆ. ಕಳೆದ ಕೆಲವು ದಿನಗಳಿಂದ ರತ್ನಗಿರಿ ಜಿಲ್ಲೆಯ ಚಿಪ್ಲುನ್‌ ಸೇರಿದಂತೆ ಹಲವು ಪ್ರದೇಶಗಳಲ್ಲಿ ಭಾರೀ ಮಳೆ ಸುರಿದಿತ್ತು ಎಂದು ತಿಳಿದು ಬಂದಿದೆ. 

- Advertisement -

Latest News

error: Content is protected !!