Friday, June 5, 2026
Homeಕರಾವಳಿಮಂಗಳೂರುಕಾರ್ಕಳ : ಬೈಕ್ ಪಲ್ಟಿಯಾಗಿ ನವ ವಿವಾಹಿತೆ ಸಾವು

ಕಾರ್ಕಳ : ಬೈಕ್ ಪಲ್ಟಿಯಾಗಿ ನವ ವಿವಾಹಿತೆ ಸಾವು

- Advertisement -
- Advertisement -

ಕಾರ್ಕಳ : ಬೈಕ್ ಗೆ ನಾಯಿ ಅಡ್ಡ ಬಂದ ಪರಿಣಾಮ ಬೈಕ್ ಪಲ್ಟಿಯಾಗಿ ನವ ವಿವಾಹಿತೆ ಸಾವನ್ನಪ್ಪಿದ ಘಟನೆ ಕಾರ್ಕಳ ಗುರುವಾಯನಕೆರೆ ರಸ್ತೆಯ ಹೊಸ್ಮಾರು ಸೇತುವೆ ಬಳಿ ಜೂನ್ 28 ರ ಸಂಜೆ ನಡೆದಿದೆ. ಈದು ಗ್ರಾಮದ ಕರೆಂಬಾಲುವಿನ ವಿಶಾಲ್ ಅವರ ಪತ್ನಿ ನೀಕ್ಷಾ (26) ಮೃತ ನವವಿವಾಹಿತೆ.

ನಿಕ್ಷಾ ಜೂ. 28ರ ಸಂಜೆ ಪತಿ ವಿಶಾಲ್ ಅವರೊಂದಿಗೆ ಬೈಕ್‌ನಲ್ಲಿ ಹೋಗುತ್ತಿದ್ದಾಗ ನಾಯಿ ದಿಢೀರೆಂದು ಅಡ್ಡ ಬಂದಿದ್ದು, ಪರಿಣಾಮ ಬೈಕ್‌ ರಸ್ತೆಗೆ ಬಿದ್ದಿದ್ದಾರೆ. ಪರಿಣಾಮ ನೀಕ್ಷಾ ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು  ಆಸ್ಪತ್ರೆಗೆ ಕರೆದೊಯ್ಯುವ ವೇಳೆ ದಾರಿ ಮಧ್ಯೆ ಕೊನೆಯುಸಿರೆಳೆದಿದ್ದಾರೆ. ನೀಕ್ಷಾ ಅವರಿಗೆ ಎರಡು ತಿಂಗಳ ಹಿಂದೆಯಷ್ಟೇ ಮದುವೆ ಆಗಿತ್ತು. ದುರಂತ ಅಂದರೆ 9 ತಿಂಗಳ ಹಿಂದೆ ನಿಕ್ಷಾ ತಮ್ಮ ತಂದೆ ಪ್ರೀತಿ ಟೈಮ್ಸ್ ಸೆಂಟರ್ ಮಾಲೀಕ ಪ್ರಕಾಶ್ ಅವರನ್ನು ಕಳೆದುಕೊಂಡಿದ್ದರು. ಇದೀಗ ನಿಕ್ಷಾ ಕೂಡ ಸಾವನ್ನಪ್ಪಿದ್ದು ಮನೆಯವರು ಕಣ್ಣೀರ ಕಡಲಲ್ಲಿ ಮುಳುಗಿದ್ದಾರೆ.

- Advertisement -

Latest News

error: Content is protected !!