Sunday, June 7, 2026
Homeತಾಜಾ ಸುದ್ದಿಉಪಚುನಾವಣೆಗೆ ನಿಖಿಲ್ ಸ್ಪರ್ಧಿಸುತ್ತಾರಾ?: ಇಂದು ಬಹಿರಂಗವಾಗಿ ನಿರ್ಧಾರ ಪ್ರಕಟಿಸಿದ ಎಚ್ ಡಿಕೆ

ಉಪಚುನಾವಣೆಗೆ ನಿಖಿಲ್ ಸ್ಪರ್ಧಿಸುತ್ತಾರಾ?: ಇಂದು ಬಹಿರಂಗವಾಗಿ ನಿರ್ಧಾರ ಪ್ರಕಟಿಸಿದ ಎಚ್ ಡಿಕೆ

- Advertisement -
- Advertisement -

ರಾಮನಗರ: ಚನ್ನಪಟ್ಟಣದಲ್ಲಿ ಪುತ್ರ ನಿಖಿಲ್ ಕುಮಾರಸ್ವಾಮಿ ಅವರನ್ನು ಸ್ಪರ್ಧೆಗೆ ಇಳಿಸಲಾಗುವುದು ಎನ್ನುವ ಸುದ್ದಿಗಳ ನಡುವೆ ಸ್ವತಃ ಕುಮಾರಸ್ವಾಮಿ ಅವರು ಇಂದು ಸ್ಪಷ್ಟನೆ ನೀಡಿದ್ದಾರೆ.

ಅವರು ಚನ್ನಪಟ್ಟಣ ಬಮೂಲ್ ಕಾರ್ಯಕ್ರಮದಲ್ಲಿ ಮಾತನಾಡಿ, ‘ನಿಖಿಲ್ ಎರಡು ಬಾರಿ ಸೋತು ಅವನು ಅನುಭವಿಸುತ್ತಿರುವ ನೋವು ಏನೆಂದು ನನಗೆ ಮಾತ್ರ ಗೊತ್ತು. ಹೀಗಾಗಿ ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಅವನನ್ನು ಕಣಕ್ಕಿಳಿಸುವುದಿಲ್ಲ,’ ಎಂದು ಬಹಿರಂಗವಾಗಿ ಸ್ಪಷ್ಟಪಡಿಸಿದ್ದಾರೆ.

ಚನ್ನಪಟ್ಟಣ ಉಪಚುನಾವಣೆಗೆ ಸಿ.ಪಿ.ಯೋಗೇಶ್ವರ್ ಆಗಬಹುದು. ಇಲ್ಲ ಜೆಡಿಎಸ್ ನವರೇ ಆಗಬಹುದು, ಎನ್ ಡಿಎ ಅಭ್ಯರ್ಥಿ ಯಾರೇ ಆದರೂ ನಾವು ಒಗ್ಗೂಡಿ ಕೆಲಸ ಮಾಡೋಣ. ಇನ್ನು ಚನ್ನಪಟ್ಟಣ ಉದ್ದಾರ ಮಾಡುತ್ತೇನೆ ಎಂದು ಬಂದಿರುವವರನ್ನು ಮೊದಲು ಚನ್ನಪಟ್ಟಣ ತಾಲೂಕಿಗೆ ಬರಬೇಕಿರುವ 61 ಕೋಟಿ ಹಾಲಿನ ಪ್ರೋತ್ಸಾಹ ಧನ ಕೊಡಿ ಎಂದು ಕೇಳಿ ಎನ್ನುವ ಮೂಲಕ ಡಿ.ಕೆ.ಶಿವಕುಮಾರ್ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

- Advertisement -

Latest News

error: Content is protected !!