Wednesday, June 3, 2026
Homeತಾಜಾ ಸುದ್ದಿಹೆಚ್ಎಸ್ ಆರ್ ಪಿ ನಂಬರ್ ಪ್ಲೇಟ್ ಅಳವಡಿಕೆಗೆ ಅವಧಿ ಸೆ. 15 ರವರೆಗೆ ವಿಸ್ತರಣೆ

ಹೆಚ್ಎಸ್ ಆರ್ ಪಿ ನಂಬರ್ ಪ್ಲೇಟ್ ಅಳವಡಿಕೆಗೆ ಅವಧಿ ಸೆ. 15 ರವರೆಗೆ ವಿಸ್ತರಣೆ

- Advertisement -
- Advertisement -

ಬೆಂಗಳೂರು: ವಾಹನಗಳಿಗೆ ಹೆಚ್ಎಸ್ ಆರ್ ಪಿ ನಂಬರ್ ಪ್ಲೇಟ್ ಗಳನ್ನು ಅಳವಡಿಸಲು ವಿಧಿಸಲಾಗಿದ್ದ ಗಡುವನ್ನು ರಾಜ್ಯ ಸರ್ಕಾರ ಮತ್ತೊಂದು ಬಾರಿಗೆ ವಿಸ್ತರಣೆ ಮಾಡಿದೆ.

ಸೆಪ್ಟೆಂಬರ್‌ 15 ರವೆಗೆ ಅವಧಿ ವಿಸ್ತರಿಸಿ ಸಾರಿಗೆ ಇಲಾಖೆ ಆದೇಶ ಹೊರಡಿಸಿದ್ದು, ಈ ಮೂಲಕ ನಾಲ್ಕನೇ ಬಾರಿಗೆ ಸರ್ಕಾರ ಅವಧಿ ವಿಸ್ತರಿಸಿದಂತಾಗಿದೆ.

ಈ ಹಿಂದೆ ಫೆಬ್ರವರಿ ತಿಂಗಳಿನಲ್ಲಿ ಅವಧಿ ವಿಸ್ತರಣೆ ಮಾಡಿ ನಂಬರ್ ಪ್ಲೇಟ್ ಅಳವಡಿಸಿಕೊಳ್ಳಲು ಸೂಚಿಸಲಾಗಿತ್ತು.2023 ರಲ್ಲೇ ವಾಹನ ಸವಾರರು ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ಪ್ಲೇಟ್ ಅಳವಡಿಸಿಕೊಳ್ಳಲು ಆದೇಶ ಹೊರಡಿಸಲ್ಪಟ್ಟಿತ್ತು.‌

ಇದೀಗ ಅವಧಿ ವಿಸ್ತರಣೆ ಮಾಡಲ್ಪಟ್ಟಿರುವ ಹಿನ್ನೆಲೆಯಲ್ಲಿ ವಾಹನ‌ ಸವಾರರು ಕೊಂಚ ನಿರಾಳರಾಗುವಂತಾಗಿದೆ.

- Advertisement -

Latest News

error: Content is protected !!