Wednesday, June 24, 2026
Homeತಾಜಾ ಸುದ್ದಿಲೋಕಸಭಾ ಚುನಾವಣಾ ಸೋಲಿನ ಪರಾಮರ್ಶೆಗೆ ಕಾಂಗ್ರೆಸ್ ಸತ್ಯ ಶೋಧನಾ ಸಮಿತಿ ರಚನೆ: ಮಾಜಿ ಸಿಎಂ ವೀರಪ್ಪ...

ಲೋಕಸಭಾ ಚುನಾವಣಾ ಸೋಲಿನ ಪರಾಮರ್ಶೆಗೆ ಕಾಂಗ್ರೆಸ್ ಸತ್ಯ ಶೋಧನಾ ಸಮಿತಿ ರಚನೆ: ಮಾಜಿ ಸಿಎಂ ವೀರಪ್ಪ ಮೊಯ್ಲಿಗೆ ಛತ್ತೀಸ್ ಗಢ ಜವಾಬ್ದಾರಿ

- Advertisement -
- Advertisement -

ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಫಲಿತಾಂಶದಲ್ಲಿ ಹಿನ್ನಡೆ ಉಂಟಾಗಿರುವ ಹಿನ್ನೆಲೆಯಲ್ಲಿ ವಸ್ತುಸ್ಥಿತಿ ವರದಿ ಪಡೆಯಲು ಕಾಂಗ್ರೆಸ್ ಹೈಕಮಾಂಡ್ ಸಮಿತಿ ರಚನೆ ಮಾಡಿದೆ.

ಎಐಸಿಸಿ ಮಟ್ಟದ ವಸ್ತು ಸ್ಥಿತಿ ಅಧ್ಯಯನ ಸಮಿತಿ ರಚಿಸಲಾಗಿದ್ದು, ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯಿಲಿ ಅವರಿಗೆ ಛತ್ತೀಸ್ ಗಢ ರಾಜ್ಯದ ಜವಾಬ್ದಾರಿ ವಹಿಸಲಾಗಿದೆ.

ಕರ್ನಾಟಕದಲ್ಲಿನ ಲೋಕಸಭಾ ಚುನಾವಣಾ ಫಲಿತಾಂಶದ ಸ್ಥಿತಿ ಗತಿ ಅರಿಯಲು ಮೂವರು ಹಿರಿಯರ ಸಮಿತಿ ರಚನೆ ಮಾಡಲಾಗಿದ್ದು, ಮಧುಸೂದನ್ ಮಿಸ್ತ್ರಿ ಅವರ ನೇತೃತ್ವ ಸಮಿತಿಯಲ್ಲಿ ಗೌರವ್ ಗೊಗೋಯ್ ಮತ್ತು ಹಿಬಿ ಈಡನ್ ಸದಸ್ಯರಾಗಿದ್ದಾರೆ.

ಮಧ್ಯಪ್ರದೇಶ, ಒಡಿಶಾ, ಛತ್ತೀಸ್ ಗಢ, ಹಿಮಾಚಲ ಪ್ರದೇಶ, ದೆಹಲಿ, ಉತ್ತರಾಖಂಡ, ಕರ್ನಾಟಕ ಮತ್ತು ತೆಲಂಗಾಣ ರಾಜ್ಯಗಳಿಗೆ ಕಾಂಗ್ರೆಸ್ ಹೈಕಮಾಂಡ್ ಅಧ್ಯಯನ ಸಮಿತಿ ರಚನೆ ಮಾಡಿದೆ.

- Advertisement -

Latest News

error: Content is protected !!